CONNECT WITH US  

ಚೆಸ್‌: ಆನಂದ್‌ಗೆ ಗೆಲುವು

ಮಾಸ್ಕೊ: ಐದು ಬಾರಿಯ ವಿಶ್ವ ಚಾಂಪಿಯನ್‌ ಭಾರತದ ವಿಶ್ವನಾಥನ್‌ ಆನಂದ್‌ ಟಾಲ್‌ ಮೆಮೊರಿಯಲ್‌ ಚೆಸ್‌ ಟೂರ್ನಿಯ 5ನೇ ಸುತ್ತಿನ ಪಂದ್ಯದಲ್ಲಿ ಇಸ್ರೇಲ್‌ನ ಬೋರಿಸ್‌ ಗೆಲ್ಫಾಂಡ್‌ ವಿರುದ್ಧ ಜಯ ಸಾಧಿಸಿದರು. ಈ ಮೂಲಕ ಟೂರ್ನಿಯಲ್ಲಿ ಜಂಟಿ 3ನೇ ಸ್ಥಾನಕ್ಕೇರಿದರು.

4ನೇ ಸುತ್ತಿನ ಪಂದ್ಯದಲ್ಲಿ ರಶ್ಯದ ವ್ಲಾದಿಮಿರ್‌ ಕ್ರಾಮ್ನಿಕ್‌ ವಿರುದ್ಧ ಆನಂದ್‌ ಸೋಲುಂಡಿದ್ದರು. ಹೀಗಾಗಿ ಈ ಗೆಲುವು ಭಾರತೀಯ ಆಟಗಾರನಿಗೆ ಮಹತ್ವದಾಗಿದೆ. ಆರಂಭದಿಂದಲೇ ಚುರುಕಿನ ಆಟ ಪ್ರದರ್ಶಿಸಿದ ಆನಂದ್‌ ಸುಲಭವಾಗಿ ಪಂದ್ಯವನ್ನು ವಶಪಡಿಸಿಕೊಂಡರು. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹಾಲೆಂಡ್‌ನ‌ ಅನೀಶ್‌ ಗಿರಿ 3.5 ಅಂಕ ಸಂಪಾದಿಸಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.


Trending videos

Back to Top