CONNECT WITH US  

ಸರಣಿ ಸೋತರೆ ಕೆಳಗಿಳಿವರೇ ಕುಕ್‌?

ಮುಂಬಯಿ: ಭಾರತದೆದುರಿನ ಟೆಸ್ಟ್‌ ಸರಣಿಯ ಬಳಿಕ ಇಂಗ್ಲೆಂಡ್‌ ನಾಯಕ ಅಲಸ್ಟೇರ್‌ ಕುಕ್‌ ನಾಯಕತ್ವಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ. ಕುಕ್‌ ಸರಣಿಯ ಆರಂಭಕ್ಕೂ ಮೊದಲು ಇಂಥದೊಂದು ಸೂಚನೆ ನೀಡಿದ್ದರು ಎಂಬುದಾಗಿ ವರದಿಯಾಗಿದೆ.

ಈ ಪ್ರವಾಸದ ಪ್ರಾರಂಭಕ್ಕೂ ಮುನ್ನ ಅಲಸ್ಟೇರ್‌ ಕುಕ್‌ ನಾಯಕತ್ವ ಬಿಡುವ ಕುರಿತು ಹೇಳಿಕೊಂಡಿದ್ದರು. ಸುದೀರ್ಘ‌ ಕಾಲ ಕುಟುಂಬವನ್ನು ಬಿಟ್ಟಿರಬೇಕಾ ದ್ದರಿಂದ ಒಂದು ಜವಾಬ್ದಾರಿಯಿಂದ ಮುಕ್ತನಾಗ ಬೇಕೆಂಬುದು ಕುಕ್‌ ನಿರ್ಧಾರ. ಅದು ನಾಯಕತ್ವಕ್ಕೆ ಗುಡ್‌ಬೈ ಹೇಳುವುದೇ ಆಗಿರುವ ಸಾಧ್ಯತೆ ಇದೆ. ಎಡಗೈ ಆರಂಭಕಾರನಾಗಿರುವ 31ರ ಹರೆಯದ ಅಲಸ್ಟೇರ್‌ ಕುಕ್‌ ಇತ್ತೀಚೆಗಷ್ಟೇ 2ನೇ ಮಗುವಿನ ತಂದೆ ಯಾಗಿದ್ದರು. ಆದರೆ ಪತ್ನಿ, ಮಕ್ಕಳು ಹಾಗೂ ಕುಟುಂಬ ದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ಅವರಿಗೆ ಲಭಿಸಿರಲಿಲ್ಲ. 

"ಇಂಗ್ಲೆಂಡಿನ ಸುದೀರ್ಘ‌ ಕ್ರಿಕೆಟ್‌ ಪ್ರವಾಸಗಳು ನಿಜಕ್ಕೂ ಬಹಳ ಕಷ್ಟಕರ. ಕುಟುಂಬದ ಜತೆ ಕಾಲ ಕಳೆಯಲಿಕ್ಕೇ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಯಕತ್ವದಿಂದ ದೂರ ಉಳಿ ಯುವ ಕಠಿನ ನಿರ್ಧಾರವೊಂದಕ್ಕೆ ಬರಬೇಕಾಗಿದೆ...' ಎಂಬುದಾಗಿ ಕುಕ್‌ ಹೇಳಿದ್ದರು. 

ಆದರೆ ಮುಂದಿನ ವರ್ಷದ ಆ್ಯಶಸ್‌ ಸರಣಿಯ ತನಕ ಕುಕ್‌ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಕೋಚ್‌ ಟ್ರೆವರ್‌ ಬೈಲಿ ಭಾರತ ಪ್ರವಾಸಕ್ಕೆ ಹೊರಡುವ ಮುನ್ನ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮೊನ್ನೆಯಷ್ಟೇ ತಂಡದ ಸಹ ಆಟಗಾರ ಜೋ ರೂಟ್‌ ಕೂಡ ಕುಕ್‌ ನಾಯಕತ್ವದ ಪರ ಹೇಳಿಕೆ ನೀಡಿ ದ್ದರು. ಅರ್ಥಾತ್‌, ಕುಕ್‌ ಈ ಸರಣಿ ಬಳಿಕ ನಾಯಕತ್ವ ತ್ಯಜಿಸಬೇಕೆಂಬ ನಿರ್ಧಾರ ತೆಗೆದುಕೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ತಾನು ಇದಕ್ಕೆ ಸಂಬಂಧಿಸಿದಂತೆ ಕುಕ್‌ ಜತೆ ಈವರೆಗೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ ಬೈಲಿ.

ಸರಣಿ ಹಿನ್ನಡೆಯ ಕಂಟಕ 
ಪ್ರಸಕ್ತ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ 2-0 ಹಿನ್ನಡೆ ಯಲ್ಲಿರುವುದೂ ಕುಕ್‌ ಪಾಲಿಗೆ ಭೀತಿಯೂ ಅವರನ್ನು ಆವರಿಸಿದೆ. ಸರಣಿಯನ್ನು ಉಳಿಸಿಕೊಳ್ಳ ಬೇಕಾದರೆ ಇಂಗ್ಲೆಂಡ್‌ ಉಳಿದೆರಡೂ ಟೆಸ್ಟ್‌ಗಳನ್ನು ಗೆಲ್ಲಬೇಕಾದುದು ಅನಿವಾರ್ಯ. ಆದರೆ ಈಗಿನ ಪರಿಸ್ಥಿತಿ ಯಲ್ಲಿ ಇದನ್ನು ಅಸಾಧ್ಯವೆಂದೇ ಭಾವಿಸಲಾಗಿದೆ. ಅಕಸ್ಮಾತ್‌ ಪವಾಡವೇನಾದರೂ ಸಂಭವಿಸಿ ಇಂಗ್ಲೆಂಡ್‌ ಸಮಬಲ ಸಾಧಿಸಿದರಷ್ಟೇ ಕುಕ್‌ ನಾಯಕತ್ವದಲ್ಲಿ ಮುಂದುವರಿದಾರು!

Trending videos

Back to Top