3- 0 ಅಥವಾ 3-1 ರಿಂದ ಸರಣಿ ಗೆಲುವು: ಸೆಹವಾಗ್
Team Udayavani, Feb 23, 2017, 10:05 AM IST
ಪುಣೆ: ಭಾರತೀಯ ತಂಡವು ಬಲಿಷ್ಠ ತಂಡವಾಗಿದ್ದು ಮುಂಬರುವ ಆಸ್ಟ್ರೇಲಿಯ ವಿರುದ್ಧದ ಸರಣಿಯನ್ನು 3-0 ಅಥವಾ 3-1 ಅಂತರದಿಂದ ಗೆಲ್ಲಲಿದೆ ಎಂದು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹವಾಗ್ ತಿಳಿಸಿದ್ದಾರೆ.
ವೇಗ ಮತ್ತು ಸ್ಪಿನ್ ದಾಳಿಯ ಗುಣಮಟ್ಟ ಮತ್ತು ಬ್ಯಾಟಿಂಗ್ ಶಕ್ತಿಯನ್ನು ಗಮನಿಸಿದರೆ ಹಾಲಿ ತಂಡ ಶ್ರೇಷ್ಠ ತಂಡಗಳಲ್ಲಿ ಒಂದಾಗಿದೆ. ವಿದೇಶದಲ್ಲೂ ಟೆಸ್ಟ್ ಸರಣಿ ಗೆಲ್ಲುವ ಸಾಮರ್ಥ್ಯವನ್ನು ಈ ತಂಡ ಹೊಂದಿದೆ . ಈ ತಂಡ ಸದ್ಯ ಅಮೋಘವಾಗಿ ಕ್ರಿಕೆಟ್ ಆಡುತ್ತಿದೆ. ಕಳೆದ 9 ಟೆಸ್ಟ್ಗಳಲ್ಲಿ ತಂಡ 8ನ್ನು ಗೆದ್ದಿದೆ. ಇದೊಂದು ಬಲುದೊಡ್ಡ ಸಾಧನೆ ಎಂದವರು ತಿಳಿಸಿದರು.