ವಿಂಡೀಸ್ ಕ್ರಿಕೆಟಿಗ ಸಾಮ್ಯುಯೆಲ್ಸ್ಗೆ ಪಾಕ್ ಸೇನೆ ಸೇರುವ ಬಯಕೆ !
Team Udayavani, Mar 13, 2017, 12:22 PM IST
ಕರಾಚಿ: ಪಾಕಿಸ್ತಾನದ ಸೈನ್ಯವನ್ನು ಸೇರುವ ಆಸೆಯನ್ನು ವೆಸ್ಟ್ ಇಂಡೀಸ್ ಕ್ರಿಕೆಟಿಗ ಮರ್ಲಾನ್ ಸಾಮ್ಯುಯೆಲ್ಸ್ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟಿ20 ಯನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಇಂತಹದೊಂದು ನಿರ್ಧಾರಕ್ಕೆ ಬಂದಿದ್ದಾರಂತೆ. ಭದ್ರತಾ ಪಡೆಗಳು ಕೂಟದುದ್ದಕ್ಕೂ ಅದ್ಭುತ ರೀತಿಯಲ್ಲಿ ಕೆಲಸ ನಿರ್ವಹಿಸಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.
ಇದನ್ನೆಲ್ಲ ನೋಡಿದ ಮೇಲೆ ನನಗೆ ಪಾಕ್ ಸೈನ್ಯದ ಮೆಟಾಲಿಕ್ ಬ್ಯಾಡ್ಜ್ ಧರಿಸಬೇಕು ಎಂದು ಅನಿಸುತ್ತಿದೆ ಎಂದು ಸಾಮ್ಯುಯೆಲ್ಸ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಡಿಯೋವೊಂದರಲ್ಲಿ ಆಸೆ ವ್ಯಕ್ತಪಡಿಸಿದ್ದಾರೆ. ಜಮೈಕಾದಲ್ಲಿ ನಾನೊಬ್ಬ ಸೈನಿಕ, ಇಲ್ಲೂ ನೀವು ನನಗೆ ಅವಕಾಶ ನೀಡಲು ನಿರ್ಧರಿಸಿದರೆ ತಿಳಿಸಿ. ನಿಮ್ಮ ಸೈನ್ಯದ ಜತೆಗೆ ಕೆಲಸ ನಿರ್ವಹಿಸಲು ಸಿದ್ಧ ಎಂದಿದ್ದಾರೆ.