ಇಂಡಿಯನ್ ವೆಲ್ಸ್ ಟೆನಿಸ್ : ಜೊಕೋವಿಕ್ಗೆ ಆಘಾತ
Team Udayavani, Mar 17, 2017, 10:34 AM IST
ಇಂಡಿಯನ್ ವೆಲ್ಸ್: ನೊವಾಕ್ ಜೊಕೋವಿಕ್ ಅವರನ್ನು ಕೆಡಹಿದ ನಿಕ್ ಕಿರ್ಗಿಯೋಸ್ ಅವರು ಇಂಡಿಯನ್ ವೆಲ್ಸ್ ಟೆನಿಸ್ ಕೂಟದ ಕ್ವಾರ್ಟರ್ಫೈನಲಿಗೇರಿದ್ದಾರೆ.
ಕ್ವಾರ್ಟರ್ಫೈನಲ್ ಹೋರಾಟದಲ್ಲಿ ಅವರು ಸ್ವಿಸ್ನ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಫೆಡರರ್ ಇನ್ನೊಂದು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅವರನ್ನು 6-2, 6-3 ನೇರ ಸೆಟ್ಗಳಿಂದ ಸೋಲಿಸಿದ್ದರು.
ಅಮೋಘ ಆಟದ ಪ್ರದರ್ಶನ ನೀಡಿದ ವಿಶ್ವದ 16ನೇ ರ್ಯಾಂಕಿನ ಕಿರ್ಗಿಯೋಸ್ 6-4, 7-6 (7-3) ಸೆಟ್ಗಳಿಂದ ಮೂರು ಬಾರಿಯ ಹಾಲಿ ಚಾಂಪಿಯನ್ ಜೊಕೋವಿಕ್ ಅವರನ್ನು ಉರುಳಿಸಿದರು. ಈ ಮೂಲಕ ಇಲ್ಲಿ ಜೊಕೋವಿಕ್ ಅವರ 19 ಪಂದ್ಯ ಗೆಲುವಿನ ಓಟಕ್ಕೆ ಬ್ರೇಕ್ ನೀಡಿದರು.
ಆಸ್ಟ್ರೇಲಿಯನ್ ಓಪನ್ನ ಫೈನಲ್ನಲ್ಲೂ ನಡಾಲ್ ಅವರನ್ನು ಕೆಡಹಿದ್ದ ಫೆಡರರ್ ಇಲ್ಲಿಯೂ ಸ್ಪೇನ್ನ ಎದುರಾಳಿಯೆದುರು ನೇರ ಸೆಟ್ಗಳ ಜಯಭೇರಿ ಸಾಧಿಸಿ ಮುನ್ನಡೆದರು. ಇದು ನಡಾಲ್ ವಿರುದ್ಧ ಫೆಡರರ್ ಅವರ ಸತತ ಮೂರನೇ ಗೆಲುವು ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ