ಆಸೀಸ್ ಅಣಕಕ್ಕೆ ಕೊಹ್ಲಿ ತಿರುಗೇಟು
Team Udayavani, Mar 20, 2017, 3:22 PM IST
ರಾಂಚಿ ಟೆಸ್ಟ್ ಪಂದ್ಯದ ಮೊದಲ ದಿನವೇ ಕೊಹ್ಲಿ ಬೌಂಡರಿ ಲೈನ್ ಸಮೀಪ ಬಿದ್ದು, ಭುಜಕ್ಕೆ ಗಾಯಮಾಡಿಕೊಂಡಿದ್ದರು. ಆಗ ಕೊಹ್ಲಿ ಭುಜವನ್ನು ಹಿಡಿದುಕೊಂಡೇ ನೋವನುಭವಿಸುತ್ತಿದ್ದರು. ಪಂದ್ಯದ 3ನೇ ದಿನವಾದ ಶನಿವಾರ ಆಸ್ಟ್ರೇಲಿಯದ ಮ್ಯಾಕ್ಸ್ವೆಲ್ ಸೇರಿದಂತೆ ಕೆಲವು ಆಟಗಾರರು ಕ್ಷೇತ್ರ ರಕ್ಷಣೆವೇಳೆ ಭುಜವನ್ನು ಹಿಡಿದುಕೊಂಡು ಕೊಹ್ಲಿಯನ್ನು ಅಣಕಿಸುತ್ತಿದ್ದರು. ಇದಕ್ಕೆ ಕೊಹ್ಲಿ ರವಿವಾರ ತಿರುಗೇಟು ನೀಡಿದ್ದಾರೆ. ಆಸೀಸ್ ದ್ವಿತೀಯ ಇನ್ನಿಂಗ್ಸ್ ವೇಳೆ ಜಡೇಜ ಬೌಲಿಂಗ್ನಲ್ಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬೌಲ್ಡ್ ಆದರು. ಆಗ ಕೊಹ್ಲಿ ತಮ್ಮ ಭುಜ ಹಿಡಿದು ಓಡುತ್ತ, ಸಂಭ್ರಮಿಸುತ್ತ ಅಣಕಿಸಿದವರಿಗೆ ತಿರುಗೇಟು ನೀಡಿದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ