CONNECT WITH US  

ಗಾಯದ ಸಮಸ್ಯೆ: ಯುಎಸ್‌ ಓಪನ್‌ ಟೆನಿಸ್‌ನಿಂದ ಜೊಕೊ ಔಟ್‌

ಲಂಡನ್‌: ಮಾಜಿ ವಿಶ್ವ ನಂಬರ್‌ ವನ್‌ ಟೆನಿಸಿಗ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ಯುಎಸ್‌ ಓಪನ್‌ ಕೂಟದಿಂದ ಹಿಂದಕ್ಕೆ ಸರಿಯಲಿದ್ದಾರೆ. ಮೊಣಕೈಯ ಗಾಯಕ್ಕೆ ತುತ್ತಾಗಿರುವುದರಿಂದ ಅವರು ಕೂಟದಲ್ಲಿ ಭಾಗವಹಿಸುತ್ತಿಲ್ಲ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ವಿಂಬಲ್ಡನ್‌ ಕೂಟದ ವೇಳೆ ಜೊಕೋವಿಕ್‌ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಭಾಗವಹಿಸಿರಲಿಲ್ಲ. 12 ವಾರ ಅವರು ಟೆನಿಸ್‌ನಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ. 

12 ಬಾರಿಯ ಸಿಂಗಲ್ಸ್‌ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ಆಗಿರುವ ಅವರು 2011ರಲ್ಲಿ ಹಾಗೂ 2015ರಲ್ಲಿ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದಿದ್ದರು. ಜೊಕೊ ಅವರನ್ನು ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.  ವರದಿ ಬಂದ ಬಳಿಕ ಮುಂದಿನ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು  ಜೊಕೊ ಅವರ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.


Trending videos

Back to Top