CONNECT WITH US  

ವಿಶ್ವ ಟೆನಿಸ್‌ ಶ್ರೇಯಾಂಕ: 5ನೇ ಸ್ಥಾನಕ್ಕೆ ಕುಸಿದ ಜೊಕೊ

ನವದೆಹಲಿ: ಮಾಜಿ ವಿಶ್ವ ನಂ.1 ಶ್ರೇಯಾಂಕಿತ ನೊವಾಕ್‌ ಜೊಕೊವಿಚ್‌ ಹೊಸದಾಗಿ ಬಿಡುಗಡೆಯಾದ ಟೆನಿಸ್‌ ಶ್ರೇಯಾಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೂ ಮುನ್ನ ಜೊಕೊ 4ನೇ ಸ್ಥಾನದಲ್ಲಿದ್ದರು. ಸ್ವಿಸ್‌ನ ಸ್ಟಾನ್‌ ವಾವ್ರಿಂಕ 3 ರಿಂದ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮೊಣಕೈ ನೋವಿನಿಂದ ಬಳಲುತ್ತಿರುವ ಜೊಕೊ ಪ್ರಸಕ್ತ ವರ್ಷದಲ್ಲಿ ಯಾವುದೇ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಘೋಷಿಸಿದ್ದಾರೆ.

ಕಳೆದು ತಿಂಗಳು ನಡೆದ ವಿಂಬಲ್ಡನ್‌ನಲ್ಲಿ ಜೊಕೊ ಭುಜದ ನೋವಿನಿಂದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅರ್ಧದಲ್ಲಿಯೇ ಹಿಂದೆ ಸರಿದಿದ್ದರು. ಆ ನಂತರ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಮೊಣಕೈ ಗಾಯ ಗಂಭೀರವಾಗಿರುವುದರಿಂದ ವೈದ್ಯರು ದೀರ್ಘಾವಧಿ ವಿಶ್ರಾಂತಿಗೆ ಸೂಚಿಸಿದ್ದರು. ಉಳಿದಂತೆ ಇಂಗ್ಲೆಂಡ್‌ನ‌ ಆ್ಯಂಡಿ ಮರ್ರೆ ವಿಂಬಲ್ಡನ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿಯೇ ಸೋತರೂ ನಂ.1ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾರಾ ಟೆನಿಸ್‌ ಆಟಗಾರರಾದ ರಾಫೆಲ್‌ ನಡಾಲ್‌ ಮತ್ತು ವಿಂಬಲ್ಡನ್‌ ವಿಜೇತ ರೋಜರ್‌ ಫೆಡರರ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ನಂ.1 ಸ್ಥಾನ ಕಾಯ್ದುಕೊಂಡ ಪ್ಲಿಸ್ಕೋವಾ: ಮಹಿಳೆಯರ ಡಬ್ಲೂéಟಿಎ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ನಂ.1ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಪ್ಲಿಸ್ಕೋವಾ ಒಟ್ಟು 6751 ಅಂಕವನ್ನು ಹೊಂದಿದ್ದಾರೆ. ರೊಮೇನಿಯಾದ ಸಿಮೋನಾ ಹಾಲೆಪ್‌ ನಂ.2ನೇ ಸ್ಥಾನಕ್ಕೆ ಜಿಗಿದ್ದಾರೆ. ಅದೇ ರೀತಿ ವಿಂಬಲ್ಡನ್‌ ಚಾಂಪಿಯನ್‌ ಸ್ಪೇನ್‌ನ ಗಾರ್ಬಿನ್‌ ಮುಗುರುಜ 4ನೇ ಶ್ರೇಯಾಂಕಕ್ಕೆ ಜಿಗಿದಿದ್ದಾರೆ.


Trending videos

Back to Top