CONNECT WITH US  

ಮತ್ತೆ ಅಪ್ಪನಾದ ಮಾಜಿ ವಿಶ್ವ ನಂ.1 ಟೆನಿಸಿಗ ಜೊಕೊ

ನವದೆಹಲಿ: ಮಾಜಿ ವಿಶ್ವ ನಂ.1 ಟೆನಿಸ್‌ ಆಟಗಾರ, 12 ಗ್ರ್ಯಾನ್‌ಸ್ಲಾಮ್‌ ವಿಜೇತ,  ನೊವಾಕ್‌ ಜೊಕೊವಿಚ್‌ 2ನೇ ಮಗುವಿಗೆ ತಂದೆಯಾಗಿದ್ದಾರೆ. 

ಜೊಕೊ ಮತ್ತು ಜೆಲೆನಾ ದಂಪತಿಗೆ 2014ರಲ್ಲಿ ಮೊದಲ ಮಗು ಗಂಡಾಗಿದ್ದು, 2ನೇ ಮಗು ಹೆಣ್ಣಾಗಿದೆ. ಜೊಕೊಗೆ ಜೆಲೆನಾ ಬಾಲ್ಯದ ಗೆಳತಿಯಾಗಿದ್ದಾರೆ. ಇಬ್ಬರೂ ದೀರ್ಘ‌ಕಾಲದಿಂದ ಡೇಟಿಂಗ್‌ ನಡೆಸಿದ್ದರು. 2013ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ 2014ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಅದೇ ವರ್ಷ ಮೊದಲ ಮಗು ಜನಿಸಿದೆ. ಜೊಕೊ ಫ್ರೆಂಚ್‌ ಓಪನ್‌ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಈ ವರ್ಷ ಯಾವುದೇ ಟೆನಿಸ್‌ ಪಂದ್ಯ ಆಡುವುದಿಲ್ಲ ಎಂದು ಘೋಷಿಸಿ, ವಿಶ್ರಾಂತಿಯಲ್ಲಿದ್ದಾರೆ.

Trending videos

Back to Top