ಬೃಹತ್‌ ಗೆಲುವಿನ ನಿರೀಕ್ಷೆಯಲ್ಲಿ ಭಾರತ


Team Udayavani, Sep 21, 2017, 10:44 AM IST

21STATE-30.jpg

ಕೋಲ್ಕತಾ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಗುರುವಾರ ನಡೆಯುವ ಎರಡನೇ ಏಕದಿನ ಪಂದ್ಯದಲ್ಲೂ ಬೃಹತ್‌ ಗೆಲುವಿನ ನಿರೀಕ್ಷೆಯನ್ನು ಭಾರತ ಇಟ್ಟುಕೊಂಡಿದೆ. ಅಗ್ರ ಕ್ರಮಾಂಕದ ಆಟಗಾರರು ಉತ್ತಮ ನಿರ್ವಹಣೆ ನೀಡಿದರೆ ಮತ್ತು ಸ್ಪಿನ್ನರ್ ಮತ್ತೆ ಆಸ್ಟ್ರೇಲಿಯದ ಓಟಕ್ಕೆ ಕಡಿವಾಣ ಹಾಕಿದರೆ ಭಾರತ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದ ಹೊಸ ಸ್ಪಿನ್‌ ತಾರೆಯರಾದ ಕುಲದೀಪ್‌ ಯಾದವ್‌ ಮತ್ತು ಯುಜ್ವೇಂದ್ರ ಚಾಹಲ್‌ ದಾಳಿಗೆ ಆಸ್ಟ್ರೇಲಿಯದ ಆಟಗಾರರು ಬಹಳಷ್ಟು ಒದ್ದಾಟ ನಡೆಸಿದ್ದರು. ಸರಣಿಯ ಮುಂದಿನ ಪಂದ್ಯಗಳಲ್ಲೂ ಅವರಿಬ್ಬರು ಇಂತಹ ದಾಳಿಯನ್ನು ಮುಂದುವರಿಸುವ ವಿಶ್ವಾಸವನ್ನು ಭಾರತ ಇಟ್ಟುಕೊಂಡಿದೆ. ಒಂದು ವೇಳೆ ಕುಲದೀಪ್‌ ಮತ್ತು ಚಾಹಲ್‌ ತಮ್ಮ ಮ್ಯಾಜಿಕ್‌ ದಾಳಿ ಮುಂದುವರಿಸಿದರೆ ಭಾರತ ಮೇಲುಗೈ ಸಾಧಿಸಬಹುದು.

ಕುಲದೀಪ್‌ ಮತ್ತು ಚಾಹಲ್‌ ದಾಳಿಯನ್ನು ನಿಭಾಯಿಸಲು ಪ್ರವಾಸಿ ತಂಡ ನೆಟ್‌ ಅಭ್ಯಾಸದ ವೇಳೆ ಭಾರತೀಯ ಬೌಲರ್‌ಗಳ ನೆರವನ್ನು ಪಡೆದಿದ್ದಾರೆ. ಕೇರಳದ ಕೆಕೆ ಜಿಯಾಸ್‌ ಚೆನ್ನೈ ಏಕದಿನ ಪಂದ್ಯದ ಮೊದಲು ಆಸ್ಟ್ರೇಲಿಯ ಆಟ ಗಾರರಿಗೆ ನೆರವಾಗಿದ್ದರೆ ಇಲ್ಲಿ ಸ್ಥಳೀಯ ಕ್ಲಬ್‌ ಬೌಲರ್‌ಗಳಾದ ಅಶುತೋಷ್‌ ಶಿಬ್ರಾಮ್‌ ಮತ್ತು ರುಪಾಕ್‌ ಗುಹ ಅಭ್ಯಾಸದ ವೇಳೆ ಬೌಲಿಂಗ್‌ ನಡೆಸಿ ಆಸೀಸ್‌ ಆಟಗಾರರಿಗೆ ನೆರವಾಗಿದ್ದಾರೆ. 

ಚೆನ್ನೈ ಪಂದ್ಯದಲ್ಲಿ ಒಂದು ವೇಳೆ ಮಳೆ ಬಾರದಿರುತ್ತಿದ್ದರೆ ನಾವು ಗೆಲ್ಲುವ ಪ್ರಯತ್ನ ನಡೆಸುತ್ತಿದ್ದೆವು. ಆದರೆ ಮಳೆಯಿಂದಾಗಿ 21 ಓವರ್‌ಗಳಲ್ಲಿ 164 ರನ್‌ ಗಳಿಸುವ ಗುರಿ ಸಿಕ್ಕಿದ ಕಾರಣ ನಮ್ಮ ಪ್ರಯತ್ನಕ್ಕೆ ತೊಂದರೆಯಾಯಿತು. ಇದು ಟ್ವೆಂಟಿ20 ಪಂದ್ಯವಾಗಿ ಬದಲಾದ ಕಾರಣ ಸೋಲು ಕಾಣುವಂತಾಯಿತು ಎಂದು ಸ್ಟೀವನ್‌ ಸ್ಮಿತ್‌ ಹೇಳಿರುವುದನ್ನು ಗಂಭೀರವಾಗಿ ಗಮ ನಿಸಬೇಕಾಗಿದೆ. ವಾರ್ನರ್‌ ಮತ್ತು ಮ್ಯಾಕ್ಸ್‌ವೆಲ್‌ ಮಾತ್ರ ಭಾರತೀಯ ದಾಳಿಯನ್ನು ಸ್ವಲ್ಪಮಟ್ಟಿಗೆ ನಿಭಾಯಿಸಲು ಯಶಸ್ವಿಯಾಗಿದ್ದರು. 

ಒಂದು ಹಂತದಲ್ಲಿ 35 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ಆಸ್ಟ್ರೇಲಿಯ ತಂಡಕ್ಕೆ ಮ್ಯಾಕ್ಸ್‌ವೆಲ್‌ ಆಸರೆಯಾಗಿದ್ದರು. ಆದರೆ ಚಾಹಲ್‌ ಮತ್ತು ಕುಲದೀಪ್‌ ಅವರ ನಿರಂತರ ದಾಳಿಯಿಂದಾಗಿ ಭಾರತ ಅಂತಿಮವಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 26 ರನ್ನುಗಳಿಂದ ಗೆಲ್ಲುವಂತಾಯಿತು.

ಭಾರತ ಗೆಲುವಿನಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಆಲ್‌ರೌಂಡ್‌ ನಿರ್ವಹಣೆ ಪ್ರಮುಖ ಪಾತ್ರ ವಹಿಸಿತ್ತು. ಒಂದು ಹಂತದಲ್ಲಿ 76 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ಪಾಂಡ್ಯ ಸಹಿತ ಧೋನಿ ಮತ್ತು ಭುವನೇಶ್ವರ್‌ ಆಧರಿಸಿದ್ದರು. ಹ್ಯಾಟ್ರಿಕ್‌ ಸಿಕ್ಸರ್‌ ಸಹಿತ 66 ಎಸೆತಗಳಿಂದ 83 ರನ್‌ ಸಿಡಿಸಿದರಲ್ಲದೇ ಧೋನಿ ಜತೆ 118 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಭಾರತದ ಉತ್ತಮ ಮೊತ್ತಕ್ಕೆ ನೆರವಾಗಿದ್ದರು.

2015ರ ಐಪಿಎಲ್‌ ಬಳಿಕ ಪಾಂಡ್ಯ ಅವರು ಬೆಳೆದ ರೀತಿ ಅಮೋಘವಾದದ್ದು. ಆರಂಭದಲ್ಲಿ ಒಟ್ಟಾರೆ ಹೊಡೆಯುತ್ತಿದ್ದ ಪಾಂಡ್ಯ ಇದೀಗ ನುರಿತ ಆಟಗಾರರಾಗಿ ಮೂಡಿ ಬರುತ್ತಿದ್ದಾರೆ. ಬ್ಯಾಟಿಂಗ್‌ ಮಾತ್ರವಲ್ಲದೇ ಬೌಲಿಂಗ್‌ ನಲ್ಲೂ ಮಿಂಚುತ್ತಿರುವ ಅವರು ಆಲ್‌ರೌಂಡರ್‌ ಆಗಿ ತಂಡಕ್ಕೆ ಆಧಾರವಾಗಿದ್ದಾರೆ. ಅವರೊಬ್ಬ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಮಿಂಚುವ ಎಲ್ಲ ಲಕ್ಷಣವಿದೆ.

ಪ್ರಚಂಡ ಫಾರ್ಮ್ನಲ್ಲಿರುವ ಭಾರತೀಯ ಬ್ಯಾಟಿಂಗ್‌ ಶಕ್ತಿಗೆ ಆಸ್ಟ್ರೇಲಿಯದ ಸ್ಪಿನ್ನರ್‌ಗಳು ಯಾವ ರೀತಿ ಬ್ರೇಕ್‌ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ನಮ್ಮ ದಾಳಿ ಯಲ್ಲಿ ಬಹಳಷ್ಟು ವೈವಿಧ್ಯವಿದೆ ಆದರೆ ನಮ್ಮ ಯೋಜನೆಯನ್ನು ಯಾವ ರೀತಿ ಕಾರ್ಯಗತಗೊಳಿಸುವುದೆಂದು ತಿಳಿಯುತ್ತಿಲ್ಲ ಎಂದು ಸ್ಪಿನ್ನರ್‌ ಆ್ಯಡಂ ಝಂಪ ಹೇಳಿದ್ದಾರೆ. ಅವರಿಗೆ ಮ್ಯಾಕ್ಸ್‌ವೆಲ್‌, ಹೆಡ್‌ ನೆರವಾಗಲಿದ್ದಾರೆ.

ಸವಾಲಿನ ಸಮಯ
ಮೊದಲ ಏಕದಿನ ಪಂದ್ಯ ಸೋತಿರುವ ಆಸ್ಟ್ರೇಲಿಯ ತಿರುಗೇಟು ನೀಡಲು ಶತಪ್ರಯತ್ನ ನಡೆಸುವ ಸಾಧ್ಯತೆಯಿದೆ. ಹಾಗಾಗಿ ಇದು ನಾಯಕ ಸ್ಟೀವನ್‌ ಸ್ಮಿತ್‌ ಅವರಿಗೆ ಸವಾಲಿನ ಸಮಯ ವಾಗಿದೆ. ಅವರ ಸಹಿತ ಡೇವಿಡ್‌ ವಾರ್ನರ್‌ ಸಿಡಿಯಬೇಕಾಗಿದೆ ಮತ್ತು ಈ ಮೂಲಕ ಉತ್ತಮ ಅಡಿಪಾಯ ಹಾಕಲು ಪ್ರಯತ್ನಿಸಬೇಕಾಗಿದೆ. 

ಹಿಲ್ಟನ್‌ ಕಾರ್ಟ್‌ರೈಟ್‌ ಚೆನ್ನೈಯಲ್ಲಿ ವೈಫ‌ಲ್ಯ ಅನುಭವಿಸಿದ್ದರಿಂದ ಟ್ರ್ಯಾವಿಸ್‌ ಹೆಡ್‌ ಅವರನ್ನು ಆರಂಭಿಕನಾಗಿ ಕಳುಹಿಸುವ ಸಾಧ್ಯತೆಯಿದೆ. ನಾಲ್ಕನೇ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್‌ ಅಥವಾ ಸ್ಟೋಯಿನಿಸ್‌ ಆಗ ಆಡಬಹುದು. ಆಲ್‌ರೌಂಡರ್‌ಗಳಾದ ಫಾಕ್ನರ್‌, ಸ್ಟೋಯಿನಿಸ್‌ ಮತ್ತು ಮ್ಯಾಕ್ಸ್‌ವೆಲ್‌ ಅವರಿಂದ ಗಮನಾರ್ಹ ಕೊಡುಗೆ ನಿರೀಕ್ಷೆಯನ್ನು ಆಸ್ಟ್ರೇಲಿಯ ಇಟ್ಟುಕೊಂಡಿದೆ.

ಉತ್ತಮ ಆರಂಭ
ಶಿಖರ್‌ ಧವನ್‌ ಬದಲಿಗೆ ಆರಂಭಿಕ ಸ್ಥಾನ ಕ್ಕೇರಿದ ಅಜಿಂಕ್ಯ ರಹಾನೆ ಮತ್ತು ರೋಹಿತ್‌ ಶರ್ಮ ಉತ್ತಮ ಆರಂಭ ಒದಗಿಸುವ ಭರವಸೆ ಇಡಲಾಗಿದೆ. ಚೆನ್ನೈಯಲ್ಲಿ ವೈಫ‌ಲ್ಯ ಅನುಭವಿಸಿದ ನಾಯಕ ವಿರಾಟ್‌ ಕೊಹ್ಲಿ ಮತ್ತೆ ರನ್‌ ಮಳೆ ಹರಿಸುವ ವಿಶ್ವಾಸದಲ್ಲಿದ್ದಾರೆ. ಕೊಹ್ಲಿ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಆಡಿದ 19 ಇನ್ನಿಂಗ್ಸ್‌ಗಳಿಂದ 4 ಶತಕ ಮತ್ತು ಆರು ಅರ್ಧಶತಕ ಸಹಿತ 1017 ರನ್‌ ಗಳಿಸಿದ್ದಾರೆ.
ಈ ಪಂದ್ಯಕ್ಕೆ ಮಳೆ ತೊಂದರೆ ನೀಡುವ  ಸಾಧ್ಯತೆಯಿದೆ.

ನಾಯಕ ಸ್ಮಿತ್‌ಗೆ  100ನೇ ಏಕದಿನ
ಕೋಲ್ಕತಾ: ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ಗೆ ಗುರುವಾರ ಭಾರತದ ವಿರುದ್ಧ ಈಡನ್‌ನಲ್ಲಿ ನಡೆಯಲಿರುವ ಏಕದಿನ ಪಂದ್ಯ 100ನೇ ಪಂದ್ಯವಾಗಲಿದೆ. 28 ವರ್ಷದ ಸ್ಮಿತ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವ ಸಿಕ್ಕಿದೆ. ನಾಯಕನಾಗಿ, ಆಟಗಾರನಾಗಿ ಭಾರೀ ಯಶಸ್ಸು ಪಡೆದಿದ್ದಾರೆ. ಇದಕ್ಕೂ ಮುನ್ನ 99 ಏಕದಿನ ಪಂದ್ಯ ಆಡಿರುವ ಸ್ಮಿತ್‌ 3188 ರನ್‌ ಬಾರಿಸಿದ್ದಾರೆ. ಅದರಲ್ಲಿ 8 ಶತಕ, 17 ಅರ್ಧಶತಕ ಸೇರಿದೆ.

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.