CONNECT WITH US  

ತೆಂಡುಲ್ಕರ್‌ ಪುತ್ರಿಯ ಟ್ವೀಟರ್‌ನಿಂದ ಶರದ್‌ ಪವಾರ್‌ಗೆ ಬೈಗುಳ!

ಸಾರಾ ನಕಲಿ ಖಾತೆಗಳನ್ನೆಲ್ಲ ಅಳಿಸಿ ಹಾಕುವಂತೆ ಮನವಿ ಮಾಡಿದ ಕ್ರಿಕೆಟ್‌ ದೇವರು

ಮುಂಬೈ: ನಕಲಿ ಟ್ವೀಟರ್‌ ಖಾತೆಗಳ ಹಾವಳಿ ಸಾಮಾನ್ಯ. ತಾರೆಯರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ಟ್ವೀಟ್‌ ಮಾಡಿದ್ದು ಹಲವಾರು ಬಾರಿ ವಿವಾದಕ್ಕೆ ಕಾರಣವಾಗಿದೆ. ಆದ್ದರಿಂದ ಟ್ವೀಟರ್‌ನಲ್ಲಿ ತಾರೆಯರ ಅಧಿಕೃತ ಖಾತೆಗಳನ್ನು ಟ್ವೀಟರ್‌ ಶುರು ಮಾಡಿದೆ. ಆದರೂ ನಕಲಿ ಖಾತೆಗಳ ಹಾವಳಿ ನಿಂತಿಲ್ಲ. ಅದಕ್ಕೀಗ ಹೊಸ ಬಲಿಪಶು ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌.

ಅವರ ಹೆಸರಿನಲ್ಲಿರುವ ಖಾತೆಯೊಂದರಿಂದ ಟ್ವೀಟೊಂದು ಪ್ರಕಟವಾಗಿದೆ. ಅದರಲ್ಲಿ ಕೇಂದ್ರದ ಮಾಜಿ ಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಟೀಕಿಸಲಾಗಿದೆ.

ಟ್ವೀಟ್‌ ಹೀಗಿದೆ: ಎನ್‌ಸಿಪಿ ನಾಯಕ ಶರದ್‌ ಪವಾರ್‌ ಮಹಾರಾಷ್ಟ್ರ ಲೂಟಿ ಮಾಡಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ಎಲ್ಲೋ ಕೆಲವರಿಗೆ ಗೊತ್ತಿರುವ ಸಂಗತಿಯೆಂದರೆ ಅವರು ಕೇಂದ್ರವನ್ನೂ ಲೂಟಿ ಮಾಡಲು ಯತ್ನಿಸಿದ್ದರೆನ್ನುವುದು...

ಈ ಟ್ವೀಟ್‌ ಪ್ರಕಟವಾಗುತ್ತಿದ್ದಂತೆ ವಿವಾದಕ್ಕೆ ಕಾರಣವಾಗಿದೆ. ಇದು ಸಚಿನ್‌ ಗಮನಕ್ಕೆ ಬರುತ್ತಿದ್ದಂತೆ ಅವರು ಟ್ವೀಟರ್‌ಗೆ ಮನವಿ ಮಾಡಿ, ಪುತ್ರಿ ಸಾರಾ ಮತ್ತು ಪುತ್ರ ಅರ್ಜುನ್‌ ಹೆಸರಲ್ಲಿರುವ ಎಲ್ಲ ನಕಲಿ ಖಾತೆಗಳನ್ನು ರದ್ದು ಮಾಡಬೇಕೆಂದು ಕೇಳಿಕೊಂಡಿದ್ದಾರೆ.
 

Trending videos

Back to Top