ಕರ್ನಾಟಕಕ್ಕೆ “ಮಹಾ’ ಪಂದ್ಯ

Team Udayavani, Nov 1, 2017, 6:10 AM IST

cricket.jpg

ಪುಣೆ: ಕರ್ನಾಟಕ ರಾಜ್ಯೋತ್ಸವದಂದೇ ನೆರೆಯ ಎದುರಾಳಿ ಮಹಾರಾಷ್ಟ್ರ ವಿರುದ್ಧ ರಾಜ್ಯ ತಂಡ ಈ ಋತುವಿನ ಮಹತ್ವದ ರಣಜಿ ಲೀಗ್‌ ಪಂದ್ಯ ಆಡಲಿಳಿಯುವುದೊಂದು ವಿಶೇಷ. ಪುಣೆಯ “ಎಂಸಿಎ ಸ್ಟೇಡಿಯಂ’ನಲ್ಲಿ ಈ ಪಂದ್ಯ ನಡೆಯಲಿದ್ದು, ಇದು ಕರ್ನಾಟಕಕ್ಕೆ ತವರಿನಾಚೆಯ ಮೊದಲ ಮುಖಾಮುಖೀ. ಇನ್ನೊಂದೆಡೆ ಮಹಾರಾಷ್ಟ್ರಕ್ಕೆ ತವರಿನಂಗಳದ ಮೊದಲ ಪಂದ್ಯ.

ಆರ್‌. ವಿನಯ್‌ಕುಮಾರ್‌ ನಾಯಕತ್ವದ ಕರ್ನಾಟಕ 2017-18ನೇ ರಣಜಿ ಋತುವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದೆ. ಮೈಸೂರಿನಲ್ಲಿ ಅಸ್ಸಾಂಗೆ ಇನ್ನಿಂಗ್ಸ್‌ ಹಾಗೂ 121 ರನ್‌ ಸೋಲುಣಿಸಿದ ಬಳಿಕ ಶಿವಮೊಗ್ಗದಲ್ಲಿ ಹೈದರಾಬಾದನ್ನು 59 ರನ್ನುಗಳಿಂದ ಉರುಳಿಸಿತು. 13 ಅಂಕಳೊಂದಿಗೆ “ಎ’ ವಿಭಾಗದ ಅಗ್ರಸ್ಥಾನಿಯಾಗಿ ವಿರಾಜಮಾನವಾಗಿದೆ.

ಇನ್ನೊಂದೆಡೆ ಅಂಕಿತ್‌ ಭವೆ° ನೇತೃತ್ವದ ಮಹಾ ರಾಷ್ಟ್ರ 2 ಪಂದ್ಯಗಳನ್ನಾಡಿದ್ದು, 7 ಅಂಕಗಳೊಂದಿಗೆ “ಎ’ ವಿಭಾಗದ 4ನೇ ಸ್ಥಾನದಲ್ಲಿದೆ. ಹೈದರಾಬಾದ್‌ ವಿರುದ್ಧದ ಮೊದಲ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡದ್ದು ಮಹಾರಾಷ್ಟ್ರ ಪಾಲಿಗೊಂದು ಹಿನ್ನಡೆ. ಆದರೆ ಅನಂತರ ಲಕ್ನೋದಲ್ಲಿ ಆತಿಥೇಯ ಉತ್ತರಪ್ರದೇಶವನ್ನು 31 ರನ್ನುಗಳಿಂದ ಮಣಿಸಿ ತನ್ನ ಪರಾಕ್ರಮ ತೋರಿದೆ. ಹೀಗಾಗಿ ತವರಿನ ಅಂಗಳದಲ್ಲಿ ಆಡುವ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ.

ಕರ್ನಾಟಕ ಉತ್ತಮ ಪ್ರದರ್ಶನ
ಕರ್ನಾಟಕ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಆರ್‌. ಸಮರ್ಥ್, ಕರುಣ್‌ ನಾಯರ್‌ ಅವರ ಬ್ಯಾಟಿಂಗ್‌ ಕರ್ನಾಟಕ ಪಾಲಿಗೆ ನಿರ್ಣಾಯಕ. ಆದರೆ ಈ ಬಾರಿ ಕೆ.ಎಲ್‌. ರಾಹುಲ್‌ ಸೇವೆಯಿಂದ ತಂಡ ವಂಚಿತವಾಗಲಿದೆ. ಅವರು ಮರಳಿ ಟೀಮ್‌ ಇಂಡಿಯಾ ಸೇರಿಕೊಂಡಿದ್ದಾರೆ. ರಾಹುಲ್‌ ಜಾಗವನ್ನು ಕೌನೈನ್‌ ಅಬ್ಟಾಸ್‌ ಅಥವಾ ಅಭಿಷೇಕ್‌ ರೆಡ್ಡಿ ತುಂಬುವ ಸಾಧ್ಯತೆ ಇದೆ.

ಹೈದರಾಬಾದ್‌ ವಿರುದ್ಧ ಎರಡೂ ಇನ್ನಿಂಗ್ಸ್‌ ಗಳಲ್ಲಿ ಸೊನ್ನೆ ಸುತ್ತಿದ ಮಾಯಾಂಕ್‌ ಅಗರ್ವಾಲ್‌ ಫಾರ್ಮ್ ಮೇಲೆ ಆತಂಕದ ಛಾಯೆ ಇದೆ. ಕೀಪರ್‌ ಸಿ.ಎಂ. ಗೌತಮ್‌ ಮರಳಿ ಬ್ಯಾಟಿಂಗ್‌ ಲಯ ಕಂಡುಕೊಳ್ಳಬೇಕಿದೆ. ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ಗಳಾದ ಕೃಷ್ಣಪ್ಪ ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗಿನಲ್ಲೂ ಮಿಂಚು ಹರಿಸುತ್ತಿರುವುದು ಕರ್ನಾಟಕ ಪಾಲಿಗೊಂದು ಬೋನಸ್‌. ಸ್ಟುವರ್ಟ್‌ ಬಿನ್ನಿ ಬ್ಯಾಟಿಂಗ್‌ ಕೂಡ ಹಿಂದಿನ ಪಂದ್ಯದಲ್ಲಿ ಕ್ಲಿಕ್‌ ಆಗಿದೆ.

ಬೌಲಿಂಗ್‌ ವಿಭಾಗದಲ್ಲಿ ಶ್ರೇಯಸ್‌ ಗೋಪಾಲ್‌-ಕೆ. ಗೌತಮ್‌ ಜೋಡಿಯ ಸ್ಪಿನ್‌ ದಾಳಿ ಘಾತಕವಾಗಿ ಪರಿಣಮಿಸಿದರೆ ಕರ್ನಾಟಕ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ. ವೇಗದ ವಿಭಾಗದಲ್ಲಿ ವಿನಯ್‌, ಮಿಥುನ್‌, ಅರವಿಂದ್‌ ಮೇಲೆ ನಂಬಿಕೆ ಇಡಬಹುದಾಗಿದೆ.

ತವರಿನ ಅಂಗಳದ ಲಾಭ
ಮಹಾರಾಷ್ಟ್ರಕ್ಕೆ ಇದು ತವರಿನ ಅಂಗಳವೆಂಬುದೊಂದು ಪ್ಲಸ್‌ ಪಾಯಿಂಟ್‌. ನಾಯಕ ಅಂಕಿತ್‌ ಭವೆ° ಯುಪಿ ವಿರುದ್ಧ ಕ್ರಮವಾಗಿ 119 ಹಾಗೂ 58 ರನ್‌ ಬಾರಿಸಿ ಕಪ್ತಾನನ ಆಟವಾಡಿದ್ದಾರೆ. ಆರಂಭಕಾರ ಋತುರಾಜ್‌ ಗಾಯಕ್ವಾಡ್‌, ಮಧ್ಯಮ ಸರದಿಯ ರಾಹುಲ್‌ ತ್ರಿಪಾಠಿ, ಕೀಪರ್‌ ರೋಹಿತ್‌ ಮೋಟ್ವಾನಿ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಫ್ಸ್ಪಿನ್ನರ್‌ ಚಿರಾಗ್‌ ಖುರಾನ ಯುಪಿ ವಿರುದ್ಧ ಎರಡೂ ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್‌ ಹಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವುದು ವಿನಯ್‌ ಪಡೆಯ ಪಾಲಿಗೊಂದು ಎಚ್ಚರಿಕೆ.

ಟಾಪ್ ನ್ಯೂಸ್

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.