ಆ್ಯಶಸ್‌: ಇಂಗ್ಲೆಂಡ್‌ ಆಮೆಗತಿಯ ಆಟ


Team Udayavani, Nov 24, 2017, 6:10 AM IST

amegati-ata.jpg

ಬ್ರಿಸ್ಬೇನ್‌: ಪ್ರತಿಷ್ಠಿತ ಆ್ಯಶಸ್‌ ಸರಣಿ “ನಿಧಾನ ಗತಿ’ಯಲ್ಲಿ ಮೊದಲ್ಗೊಂಡಿದ್ದು, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಇಂಗ್ಲೆಂಡ್‌ 80.3 ಓವರ್‌ಗಳಲ್ಲಿ 4 ವಿಕೆಟಿಗೆ ಕೇವಲ 196 ರನ್‌ ಗಳಿಸಿದೆ. ಪಂದ್ಯಕ್ಕೆ ಮಳೆಯಿಂದಲೂ ಅಡಚಣೆಯಾಯಿತು.

ಬ್ರಿಸ್ಬೇನ್‌ನ “ಗಾಬಾ’ ಅಂಗಳದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುವ ಇಂಗ್ಲೆಂಡ್‌ ಕಪ್ತಾನ ಜೋ ರೂಟ್‌ ಅವರ ನಿರ್ಧಾರ ಫ‌ಲ ಕೊಡಲಿಲ್ಲ. ಅನುಭವಿ ಆರಂಭಕಾರ, ಮಾಜಿ ನಾಯಕ ಅಲಸ್ಟೇರ್‌ ಕುಕ್‌ ಆವರನ್ನು ಪಂದ್ಯದ 3ನೇ ಓವರಿನಲ್ಲೇ ವೇಗಿ ಮಿಚೆಲ್‌ ಸ್ಟಾರ್ಕ್‌ ಬಲಿ ಪಡೆಯುವುದರೊಂದಿಗೆ ಆಸೀಸ್‌ಗೆ ಮೇಲುಗೈ ಒದಗಿಸಿದರು. ಕುಕ್‌ ಗಳಿಕೆ ಕೇವಲ 2 ರನ್‌.

ಸ್ಟೋನ್‌ಮ್ಯಾನ್‌-ವಿನ್ಸ್‌ ರಕ್ಷಣೆ
ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಮಾರ್ಕ್‌ ಸ್ಟೋನ್‌ಮ್ಯಾನ್‌ ಮತ್ತು ಜೇಮ್ಸ್‌ ವಿನ್ಸ್‌ ಬಂಡೆಯಂತೆ ನಿಂತು ಪರಿಸ್ಥಿತಿಯನ್ನು ಸುಧಾರಿಸಲು ಯತ್ನಿಸಿದರು. ಇದರಲ್ಲಿ ಯಶಸ್ವಿಯೂ ಆದರು.  2ನೇ ವಿಕೆಟಿಗೆ 105 ರನ್‌ ಒಟ್ಟುಗೂಡಿಸಿದರು. ಇವರ ಆಟ ಅತ್ಯಂತ ಎಚ್ಚರಿಕೆ ಹಾಗೂ ಅಷ್ಟೇ ನಿಧಾನ ಗತಿಯಿಂದ ಕೂಡಿತ್ತು. ಈ 105 ರನ್ನಿಗೆ ಬರೋಬ್ಬರಿ 52 ಓವರ್‌ ತೆಗೆದುಕೊಂಡರು. ಆದರೆ ಇಬ್ಬರೂ ಅರ್ಧ ಶತಕದೊಂದಿಗೆ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಈ ಜೋಡಿ ಬೇರ್ಪಟ್ಟ ಬಳಿಕ ಪ್ಯಾಟ್‌ ಕಮಿನ್ಸ್‌ 2 ಪ್ರಬಲ ಆಘಾತವಿಕ್ಕಿದರು. ಒಟ್ಟಾರೆಯಾಗಿ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯವೇ ಮೇಲುಗೈ ಸಾಧಿಸಿದೆ ಎನ್ನಲಡ್ಡಿಯಿಲ್ಲ.

3ನೇ ಟೆಸ್ಟ್‌ ಆಡುತ್ತಿರುವ ಎಡಗೈ ಆರಂಭಕಾರ ಮಾರ್ಕ್‌ ಸ್ಟೋನ್‌ಮ್ಯಾನ್‌ 159 ಎಸೆತ ಎದುರಿಸಿ, ಕೇವಲ 3 ಬೌಂಡರಿ ನೆರವಿನಿಂದ  53 ರನ್‌ ಹೊಡೆದರು. ಇದು ಸ್ಟೋನ್‌ಮ್ಯಾನ್‌ ಅವರ 2ನೇ ಅರ್ಧ ಶತಕ. ಒಂದು ರನ್ನಿನಿಂದ ತಮ್ಮ ಜೀವನಶ್ರೇಷ್ಠ ಬ್ಯಾಟಿಂಗನ್ನು ಸುಧಾರಿಸಿಕೊಂಡರು. 8ನೇ ಟೆಸ್ಟ್‌ ಆಡಲಿಳಿದ ಬಲಗೈ ಆಟಗಾರ ಜೇಮ್ಸ್‌ ವಿನ್ಸ್‌ 170 ಎಸೆತಗಳನ್ನೆದುರಿಸಿ 83 ರನ್‌ ಬಾರಿಸಿದರು. ಇದು ಅವರ ಪ್ರಥಮ ಅರ್ಧ ಶತಕ. 12 ಬೌಂಡರಿಗಳ ಮೂಲಕ ಆಸೀಸ್‌ ಬೌಲರ್‌ಗಳನ್ನು ದಂಡಿಸಿದರು. ಸೆಂಚುರಿ ನಿರೀಕ್ಷೆ ಮೂಡಿಸಿದ್ದ ವಿನ್ಸ್‌ ದುರದೃಷ್ಟವಶಾತ್‌ ರನೌಟ್‌ ಸಂಕಟಕ್ಕೆ ಸಿಲುಕಿದರು.

ನಾಯಕ ಜೋ ರೂಟ್‌ ಬೇರೂರಿ ನಿಲ್ಲಲಿಲ್ಲ. ಕೇವಲ 15 ರನ್‌ ಮಾಡಿ ಕಮಿನ್ಸ್‌ಗೆ ಲೆಗ್‌ ಬಿಫೋರ್‌ ಆದರು. 50 ಎಸೆತಗಳ ಈ ಆಟದಲ್ಲಿ ಒಂದು ಬೌಂಡರಿ ಇತ್ತು.

5ನೇ ವಿಕೆಟಿಗೆ ಜತೆಗೂಡಿರುವ ಡೇವಿಡ್‌ ಮಾಲನ್‌-ಮೊಯಿನ್‌ ಅಲಿ ದಿನದ ಅಂತಿಮ ಅವಧಿಯ 10 ಓವರ್‌ಗಳ ಆಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇವರಿಬ್ಬರ ಜತೆಯಾಟದಲ್ಲಿ 51 ರನ್‌ ಒಟ್ಟುಗೂಡಿದೆ. ಇಂಗ್ಲೆಂಡ್‌ ಪಾಲಿಗೆ ಇವರಿಬ್ಬರ ಜತೆಯಾಟ ನಿರ್ಣಾಯಕ. ಬೇರ್‌ಸ್ಟೊ, ವೋಕ್ಸ್‌ ಆಟ ಬಾಕಿ ಇದೆ.
ಆಸ್ಟ್ರೇಲಿಯ ಪರ ಕೆಮರಾನ್‌ ಬಾನ್‌ಕ್ರಾಫ್ಟ್ ಟೆಸ್ಟ್‌ ಪ್ರವೇಶ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-4 ವಿಕೆಟಿಗೆ 196 (ವಿನ್ಸ್‌ 83, ಸ್ಟೋನ್‌ಮ್ಯಾನ್‌ 53, ಮಾಲನ್‌ ಬ್ಯಾಟಿಂಗ್‌ 28, ರೂಟ್‌ 15, ಅಲಿ ಬ್ಯಾಟಿಂಗ್‌ 13, ಕುಕ್‌ 2, ಕಮಿನ್ಸ್‌ 59ಕ್ಕೆ 2, ಸ್ಟಾರ್ಕ್‌ 45ಕ್ಕೆ 1).

ಟಾಪ್ ನ್ಯೂಸ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.