CONNECT WITH US  

ದ್ರಾವಿಡ್‌ಗೆ ಹುಟ್ಟುಹಬ್ಬ  ಸಂಭ್ರಮ

ಬೆಂಗಳೂರು: "ಗೋಡೆ' ಎಂದೇ ಖ್ಯಾತರಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಗುರುವಾರ 45ನೇ ಹುಟ್ಟುಹಬ್ಬವನ್ನು ನ್ಯೂಜಿ ಲ್ಯಾಂಡ್‌ನ‌ಲ್ಲಿ ಅಂಡರ್‌-19 ತಂಡದ ಜತೆ ಆಚರಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಹಾಲಿ ಮತ್ತು ಮಾಜಿ ಆಟಗಾರರು ದ್ರಾವಿಡ್‌ಗೆ ಶುಭ ಹಾರೈಸಿದ್ದಾರೆ.

ರಾಹುಲ್‌ ದ್ರಾವಿಡ್‌ ಅಂಡರ್‌-19 ಭಾರತ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್‌ನ‌ಲ್ಲಿ ಜ. 13ರಿಂದ ಕಿರಿಯರ ವಿಶ್ವಕಪ್‌ ಆರಂಭವಾಗಲಿದೆ. ಪೃಥ್ವಿ ಶಾ ನೇತೃತ್ವದ ಆಟಗಾರರು ಗುರುವಾರ ದ್ರಾವಿಡ್‌ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

Trending videos

Back to Top