ಭಾರತಕ್ಕೆ ಇಂದು ಸುಲಭ ಸವಾಲು


Team Udayavani, Jan 16, 2018, 12:22 PM IST

19-23.jpg

ಮೌಂಟ್‌ ಮಾಂಗನಿ: ಬಲಿಷ್ಠ ಆಸ್ಟ್ರೇಲಿಯವನ್ನು ಭರ್ತಿ 100 ರನ್ನುಗಳಿಂದ ಉರುಳಿಸಿದ ಸಂಭ್ರಮದಲ್ಲಿರುವ ಭಾರತದ ಕಿರಿಯರು ಮಂಗಳವಾರದ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಮುಖಾಮುಖೀಯಲ್ಲಿ “ಕ್ರಿಕೆಟ್‌ ಗುಬ್ಬಚ್ಚಿ’ ಪಪುವಾ ನ್ಯೂ ಗಿನಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಈ ಪಂದ್ಯ ಗೆದ್ದರೆ ಪೃಥ್ವಿ ಶಾ ಪಡೆ ನಾಕೌಟ್‌ ಪ್ರವೇಶ ಬಹುತೇಕ ಖಚಿತವಾಗಲಿದೆ. 

3 ಬಾರಿಯ ಚಾಂಪಿಯನ್‌ ಭಾರತ, ಇಷ್ಟೇ ಸಲ ಪ್ರಶಸ್ತಿ ಎತ್ತಿದ ಆಸ್ಟ್ರೇಲಿಯವನ್ನು ಮೊದಲ ಪಂದ್ಯದಲ್ಲೇ ಮಣಿಸಿ ಇಡೀ ಕೂಟಕ್ಕಾಗುವಷ್ಟು ಆತ್ಮವಿಶ್ವಾಸವನ್ನು ತುಂಬಿಕೊಂಡಿದೆ. ಹೀಗಾಗಿ ಪಪುವಾ ನ್ಯೂ ಗಿನಿಯನ್ನು ಭಾರೀ ಅಂತರದಿಂದ ಮಣಿಸುವುದು ಭಾರತದ ಕಿರಿಯರ ಯೋಜನೆ. ಇನ್ನೊಂದೆಡೆ ನ್ಯೂ ಗಿನಿ ತನ್ನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆಗೆ ಶರಣಾಗಿದೆ. ಕೊನೆಯ ಲೀಗ್‌ ಪಂದ್ಯದಲ್ಲಿ ಶಾ ಬಳಗ ಜಿಂಬಾಬ್ವೆಯನ್ನು ಎದುರಿಸಲಿದೆ. ಅಜೇಯವಾಗಿ ನಾಕೌಟ್‌ ಪ್ರವೇಶಿಸುವ ದ್ರಾವಿಡ್‌ ಹುಡುಗರ ಯೋಜನೆ ಇಲ್ಲಿ ಸಾಕಾರಗೊಳ್ಳುವ ಎಲ್ಲ ಸಾಧ್ಯತೆ ಇದೆ.

ಭಾರತದ ಯಶಸ್ವಿ ಕಾರ್ಯತಂತ್ರ
ಆಸ್ಟ್ರೇಲಿಯ ಎದುರಿನ ಮೊದಲ ಪಂದ್ಯ ಭಾರತದ ಯೋಜನೆಯಂತೆಯೇ ಸಾಗಿದ್ದನ್ನು ಮರೆಯುವಂತಿಲ್ಲ. ಪೃಥ್ವಿ ಶಾ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕ್ಷಣದಿಂದ ಎಲ್ಲ ಅಂಶಗಳೂ ಭಾರತಕ್ಕೆ ಪೂರಕವಾಗಿಯೇ ಪರಿಣಮಿಸಿದವು. ಆಕ್ರಮಣಕಾರಿ ಆಟದ ಮೂಲಕ ತಂಡದ ಮೊತ್ತವನ್ನು ಮುನ್ನೂರರಾಚೆ ವಿಸ್ತರಿಸಿದ್ದು, ಬಳಿಕ ಸಾಂ ಕ ಬೌಲಿಂಗ್‌ ದಾಳಿ ನಡೆಸಿ ಕಾಂಗರೂ ಮೇಲೆ ಮುಗಿಬಿದ್ದದ್ದೆಲ್ಲ ಕಿರಿಯರ ಯಶಸ್ವಿ ಕಾರ್ಯತಂತ್ರಕ್ಕೆ ಉತ್ತಮಮ ಉದಾಹರಣೆ. ಅಂಡರ್‌-19 ಏಶ್ಯ ಕಪ್‌ ಕ್ರಿಕೆಟ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತ, ವಿಶ್ವಕಪ್‌ನಲ್ಲಿ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಯೋಜನೆ ರೂಪಿಸಿರುವುದರಲ್ಲಿ ಅನುಮಾನವಿಲ್ಲ.

ಪೃಥ್ವಿ ಶಾ, ಮನೋಜ್‌ ಕಾಲಾ, ಶುಭಂ ಗಿಲ್‌ ಅವರ ಅಮೋಘ ಬ್ಯಾಟಿಂಗ್‌ ಭಾರತದ ಭಾರೀ ಮೊತ್ತದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಕಮಲೇಶ್‌ ನಾಗರ್ಕೋಟಿ, ಶಿವಂ ಮಾವಿ ಘಾತಕ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದರು. ಅದರಲ್ಲೂ ರಾಜಸ್ಥಾನದ ನಾಗರ್ಕೋಟಿ ಅವರ 150 ಕಿ.ಮೀ. ವೇಗದ ಎಸೆತಗಳು, ಆ ಶೈಲಿ ಎಲ್ಲರನ್ನೂ ಮೋಡಿ ಮಾಡಿದ್ದವು. ಇವರ ದಾಳಿಯನ್ನು ಮೆಟ್ಟಿ ನಿಲ್ಲುವುದು ಪಪುವಾ ನ್ಯೂ ಗಿನಿ ತಂಡದ ಅನನುಭವಿ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಲ್ಲ. 

ಅರ್ಹತಾ ಸುತ್ತಿನಲ್ಲಿ ಅಜೇಯ
ಪಪುವಾ ನ್ಯೂ ಗಿನಿ ಆಡುತ್ತಿರುವ 8ನೇ ವಿಶ್ವಕಪ್‌ ಪಂದ್ಯಾವಳಿ ಇದಾಗಿದೆ. 2014ರ ಬಳಿಕ ಮೊದಲ ಸಲ ಆಡುತ್ತಿದೆ. ಸಮೋವಾದಲ್ಲಿ ನಡೆದ “ಈಸ್ಟ್‌ ಏಶ್ಯ ಪೆಸಿಫಿಕ್‌’ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಅಜೇಯವಾಗಿ ಉಳಿದ ಹೆಗ್ಗಳಿಕೆ ನ್ಯೂ ಗಿನಿಯದ್ದು. ಉತ್ತಮ ಹೋರಾಟ ಹಾಗೂ ಪರಿಣಾಮಕಾರಿ ಪ್ರದರ್ಶನದಿಂದ ಅದು ಗಮನ ಸೆಳೆದಿತ್ತು. ಆದರೆ ಬಲಾಡ್ಯ ತಂಡಗಳನ್ನು ಹೊಂದಿರುವ ವಿಶ್ವಕಪ್‌ನಂಥ ಪ್ರಧಾನ ಸುತ್ತಿನಲ್ಲಿ ಸ್ಪರ್ಧಿಸುವುದು ಸುಲಭವಲ್ಲ. ಈ ಅರಿವನ್ನು ಅದು ಹೊಂದಿದೆ. ಆದರೆ ಪಪುವಾ ನ್ಯೂ ಗಿನಿಯಂಥ ತಂಡಗಳಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸಿದ್ದೇ ಪ್ರತಿಷ್ಠೆಯ ಸಂಗತಿ!

ಪಾಕಿಗೆ ಐರಿಷ್‌ ಸವಾಲು
ವಾಂಗರಿಯಲ್ಲಿ ನಡೆಯುವ ದಿನದ ಇನ್ನೊಂದು ಪಂದ್ಯ ದಲ್ಲಿ ಪಾಕಿಸ್ಥಾನ-ಅಯರ್‌ಲ್ಯಾಂಡ್‌ ಸೆಣಸಲಿವೆ. ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ಥಾನಕ್ಕೆ ಶರಣಾದ ಪಾಕಿಸ್ಥಾನಕ್ಕೆ ಇದು ಮಹತ್ವದ ಪಂದ್ಯ. ಅಯರ್‌ಲ್ಯಾಂಡ್‌ ಕೂಡ ಮೊದಲ ಮುಖಾ ಮುಖೀಯಲ್ಲಿ ಶ್ರೀಲಂಕಾ ವಿರುದ್ಧ ನಾಟಕೀಯ ಕುಸಿತ ಕಂಡು ಸೋಲನುಭವಿಸಿತ್ತು. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ಗೆಲ್ಲುವ ತಂಡಕ್ಕಷ್ಟೇ ಉಳಿಗಾಲ ಎಂಬುದು ಸದ್ಯದ ಸ್ಥಿತಿ.

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.