CONNECT WITH US  

ಅಪರಿಚಿತ ಚುಂಗ್‌ ಬಲೆಗೆ ಬಿದ್ದ ಜೊಕೋವಿಕ್‌!

ಮೆಲ್ಬರ್ನ್: ದಕ್ಷಿಣ ಕೊರಿಯಾದ ಅಪರಿಚಿತ ಟೆನಿಸಿಗ ಚುಂಗ್‌ ಹೈಯಾನ್‌ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಭಾರೀ ದೊಡ್ಡ ಬೇಟೆಯಾಡಿದ್ದಾರೆ. 12 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ನೊವಾಕ್‌ ಜೊಕೋವಿಕ್‌ ಅವರನ್ನು ಮಣಿಸಿ ಆಘಾತಕಾರಿ ಫ‌ಲಿತಾಂಶಕ್ಕೆ ಸಾಕ್ಷಿಯಾಗಿದ್ದಾರೆ. 

ಸೋಮವಾರದ ತೃತೀಯ ಸುತ್ತಿನ ಕದನದಲ್ಲಿ ಅವರು ಟೈಬ್ರೇಕರ್‌ ಹೋರಾಟದಲ್ಲಿ ಮೇಲುಗೈ ಸಾಧಿಸಿ 7-6 (7-4), 7-5, 7-6 (7-3) ಅಂತರದ ಅಸಾಮಾನ್ಯ ಗೆಲುವಿನೊಂದಿಗೆ ಕ್ವಾರ್ಟರ್‌ ಫೈನಲಿಗೆ ನೆಗೆದರು.

ಶ್ರೇಯಾಂಕ ರಹಿತ ಟೆನಿಸಿಗನಾಗಿರುವ ಚುಂಗ್‌ ಇದಕ್ಕೂ ಮುನ್ನ ಅಲೆಕ್ಸಾಂಡರ್‌ ಜ್ವೆರೇವ್‌ (ಜೂ.), ಮಿಶಾ ಜ್ವೆರೇವ್‌ ಹಾಗೂ ಮೆಡ್ವೆಡೇವ್‌ ಅವರಿಗೆ ಸೋಲುಣಿಸಿದ್ದರು. ಇದು ಚುಂಗ್‌ ಕಾಣುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌. ಈ ಕೊರಿಯನ್‌ ಟೆನಿಸಿಗ ಫ್ರೆಂಚ್‌ ಓಪನ್‌ನಲ್ಲಿ 3ನೇ ಸುತ್ತು ಮುಟ್ಟಿದ್ದೇ ಈವರೆಗಿನ ದೊಡ್ಡ ಸಾಧನೆಯಾಗಿತ್ತು. ಯುಎಸ್‌ ಓಪನ್‌ನಲ್ಲಿ 2ನೇ ಸುತ್ತು, ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಇನ್ನೊಂದು ಗಮನಾರ್ಹ ಸಂಗತಿಯೆಂದರೆ, 2 ವರ್ಷಗಳ ಹಿಂದೆ ಇದೇ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಚುಂಗ್‌ ಅವರನ್ನು ಜೊಕೋವಿಕ್‌ ಮೊದಲ ಸುತ್ತಿನಲ್ಲೇ ಸೋಲಿಸಿ ಮನೆಗೆ ಕಳುಹಿಸಿದ್ದರು. ಟೆನಿಸ್‌ ಕಾಲಚಕ್ರ ತಿರುಗಿದೆ. ಚುಂಗ್‌ ಸೇಡು ತೀರಿಸಿಕೊಂಡು ಮೆರೆದಿದ್ದಾರೆ!

"ನಾನು ಇಂದಿನ ಪಂದ್ಯವನ್ನು ಗೆಲ್ಲುತ್ತೇನೆಂದು ಭಾವಿಸಿರಲಿಲ್ಲ. ಮಹಾನ್‌ ಟೆನಿಸಿಗ ಜೊಕೋವಿಕ್‌ ವಿರುದ್ಧ ಆಡುವುದೇ ನನಗೊಂದು ಹೆಮ್ಮೆ ಹಾಗೂ ಗೌರವದ ಸಂಗತಿ ಆಗಿತ್ತು' ಎಂದು ಚುಂಗ್‌ ಗೆಲವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.

14ರಷ್ಟು ಕೆಳ ಶ್ರೇಯಾಂಕದೊಂದಿಗೆ ಮೆಲ್ಬರ್ನ್ ಪಾರ್ಕ್‌ನಲ್ಲಿ ಆಡಲಿಳಿದ ಜೊಕೋವಿಕ್‌ ಒಟ್ಟು 6 ಸಲ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಕೊನೆಯ ಸಲ ಇಲ್ಲಿ ಪ್ರಶಸ್ತಿ ಎತ್ತಿದ್ದು 2016ರಲ್ಲಿ.

ಸುಂಗ್‌ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಏರಿಹೋದ ಮೊದಲ ದಕ್ಷಿಣ ಕೊರಿಯಾ ಆಟಗಾರ. ಇಲ್ಲಿ ಅವರು ಮತ್ತೂಬ್ಬ "ಅಪರಿಚಿತ ಆಟಗಾರ' ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗೆÅನ್‌ ವಿರುದ್ಧ ಹೋರಾಡಬೇಕಿದೆ. ಸ್ಯಾಂಡ್‌ಗೆÅನ್‌ 5 ಸೆಟ್‌ಗಳ ಮ್ಯಾರಥಾನ್‌ ಹೋರಾಟದ ಬಳಿಕ ಡೊಮಿನಿಕ್‌ ಥೀಮ್‌ ಅವರನ್ನು 6-2, 4-6, 7-6 (7-4), 6-7 (7-9), 6-3 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.

ಫೆಡರರ್‌ ಗೆಲುವಿನ ಓಟ
ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆ ಮುಂದಿರಿಸಿ ಕ್ವಾರ್ಟರ್‌ ಫೈನಲ್‌ ಮುಟ್ಟಿದರು. ಆದರೆ 80ನೇ ರ್‍ಯಾಂಕಿಂಗ್‌ ಆಟಗಾರ, ಹಂಗೇರಿಯ ಮಾರ್ಟನ್‌ ಫ‌ುಕೊÕàವಿಕ್‌ ಅವರೆದುರು ಗೆಲುವು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ. ಅಂತರ 6-4, 7-6 (7-3), 6-2. ಫೆಡರರ್‌ ಪಾಲಿಗೆ ಇದು 14ನೇ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌. 1977ರ ಬಳಿಕ ಇಲ್ಲಿ ಎಂಟರ ಸುತ್ತು ಪ್ರವೇಶಿಸಿದ ಅತಿ ಹಿರಿಯ ಆಟಗಾರನೆಂಬ ದಾಖಲೆ ಈಗ ಫೆಡರರ್‌ ಪಾಲಾಗಿದೆ. ಅಂದು ಕೆನ್‌ ರೋಸ್‌ವಾಲ್‌ ಈ ಸಾಧನೆ ಮಾಡಿದ್ದರು.

ರೋಜರ್‌ ಫೆಡರರ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಜೆಕ್‌ ಗಣರಾಜ್ಯದ ಥಾಮಸ್‌ ಬೆರ್ಡಿಶ್‌. ಇನ್ನೊಂದು ಪಂದ್ಯದಲ್ಲಿ ಬೆರ್ಡಿಶ್‌ ಇಟೆಲಿಯ ಫ್ಯಾಬಿಯೊ ಫೊಗಿನಿ ವಿರುದ್ಧ 6-1, 6-4, 6-4 ಅಂತರದ ಗೆಲುವು ಸಾಧಿಸಿದರು.

Trending videos

Back to Top