CONNECT WITH US  

ಇಂಡೋನೇಷ್ಯ ಮಾಸ್ಟರ್ ನಿರೀಕ್ಷೆ ಹೆಚ್ಚಿಸಿದ ಸಿಂಧು, ಶ್ರೀಕಾಂತ್‌

ಜಕರ್ತಾ: ಹೊಸ ಋತುವಿನಲ್ಲಿ ಉತ್ತಮ ಆರಂಭದತ್ತ ದೃಷ್ಟಿ ನೆಟ್ಟಿರುವ ಭಾರತದ ಸ್ಟಾರ್‌ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಕಿಡಂಬಿ ಶ್ರೀಕಾಂತ್‌ ಮಂಗಳವಾರ ಆರಂಭವಾಗಲಿರುವ 350,000 ಡಾಲರ್‌ ಬಹುಮಾನದ "ಇಂಡೋನೇಷ್ಯ ಮಾಸ್ಟರ್  ವರ್ಲ್ಡ್ ಟೂರ್‌ ಸೂಪರ್‌ 500 ಟೂರ್ನಮೆಂಟ್‌'ನಲ್ಲಿ ಭಾರತದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಕಳೆದ ಋತುವಿನಲ್ಲಿ ಸಾಕಷ್ಟು ಪ್ರಶಸ್ತಿ ಗೆದ್ದಿರುವ ಸಿಂಧು, ಶ್ರೀಕಾಂತ್‌ 2018ರ ವರ್ಷದಲ್ಲೂ ಇದೇ ಸಾಧನೆಯನ್ನು ಪುನರಾವರ್ತಿಸುವ ಯೋಜನೆಯಲ್ಲಿದ್ದಾರದೆ. ಸಿಂಧು ಮೊದಲ ಸುತ್ತಿನಲ್ಲಿ ಆತಿಥೇಯ ನಾಡಿನ ಹನ್ನಾ ರಮಾದಿನಿ ವಿರುದ್ಧ, ಕೆ. ಶ್ರೀಕಾಂತ್‌ ಮಲೇಷ್ಯದ ಜುಲ್ಫಾದ್ಲಿ ಜುಲ್ಕಿಫ್ಲಿ ವಿರುದ್ಧ ಮೊದಲ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ. ಕಾಲು ನೋವಿನಿಂದ ಸುಧಾರಿಸಿರುವ ಲಂಡನ್‌ ಗೇಮ್ಸ್‌ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಈ ಕೂಟದಲ್ಲಿ 8ನೇ ವಿಶ್ವ ರ್‍ಯಾಂಕಿಂಗ್‌ನ ಚೀನೀ ಆಟಗಾರ್ತಿ ಚೆನ್‌ ಯೂಫಿ ಅವರನ್ನು ಎದುರಿಸಲಿದ್ದಾರೆ.

ಭಾರತದ ಇತರ ಸ್ಪರ್ಧಿಗಳಾದ ಎಚ್‌.ಎಸ್‌. ಪ್ರಣಯ್‌ ಡೆನ್ಮಾರ್ಕ್‌ನ ರಸ್ಮಸ್‌ ಜಿಮೆR ವಿರುದ್ಧ, ಸಮೀರ್‌ ವರ್ಮ ಜಪಾನಿನ ಕಜುಮಸ ಸಕಾಯ್‌ ವಿರುದ್ಧ ಹೋರಾಟ ಆರಂಭಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜಪಾನಿನ 8ನೇ ಶ್ರೇಯಾಂಕದ ಟಕುಟೊ ಇಂಕ್ವೆ-ಯುಕಿ ಕನೆಕೊ ವಿರುದ್ಧ, ಮನು ಅತ್ರಿ-ಬಿ ಸುಮೀತ್‌ ರೆಡ್ಡಿ ಚೈನೀಸ್‌ ತೈಪೆಯ ಲು ಚಿಂಗ್‌ ಯಾವೊ-ಯಾಂಗ್‌ ಪೊ ಹಾನ್‌ ವಿರುದ್ಧ ಮೊದಲ ಸುತ್ತಿನ ಪಂದ್ಯವನ್ನಾಡುವರು.


Trending videos

Back to Top