CONNECT WITH US  

ಇಂಡಿಯನ್‌ ಓಪನ್‌ ಬ್ಯಾಡ್ಮಿಂಟನ್‌ ದ್ವಿತೀಯ ಸುತ್ತಿಗೆ ಸಿಂಧು, ಸೈನಾ

ಹೊಸದಿಲ್ಲಿ: ಸೈನಾ ನೆಹ್ವಾಲ್‌ ಮತ್ತು ಪಿ.ವಿ. ಸಿಂಧು ಇಂಡಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಪ್ರಬಲ ಆಟಗಾರ ಎಚ್‌.ಎಸ್‌. ಪ್ರಣಯ್‌ ತನಗಿಂತ ಕೆಳಕ್ರಮಾಂಕದ ಆಟಗಾರನ ವಿರುದ್ಧ ಸೋಲುಂಡಿದ್ದಾರೆ.

ಇತ್ತೀಚೆಗೆ ನಡೆದ ಇಂಡೋನೇಷ್ಯಾ ಮಾಸ್ಟರ್ ಕೂಟದಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಸೈನಾ ನೆಹ್ವಾಲ್‌ 21-15, 21-9ರಿಂದ ಡೆನ್ಮಾರ್ಕ್‌ನ ಸೋಫಿ ಹೊಲ್ಮ್ಬೋಯ್‌ ದಹ್ಲ ವಿರುದ್ಧ ಗೆಲುವು ಸಾಧಿಸಿ 2ನೇ ಸುತ್ತಿಗೆ ಏರಿದರು. ಮೊದಲನೇ ಗೇಮ್‌ನಲ್ಲಿ ಸೈನಾಗೆ ಡೆನ್ಮಾರ್ಕ್‌ ಆಟಗಾರ್ತಿ ತಕ್ಕ ಮಟ್ಟಿನ ಸವಾಲು ನೀಡಿದ್ದರು. ಆದರೆ ಆ ಸವಾಲನ್ನು ಸೈನಾ ಸಮರ್ಥವಾಗಿ ಎದುರಿಸಿ ಗೆಲುವು ಪಡೆದರು. 2ನೇ ಗೇಮ್‌ನಲ್ಲಿ ಸೈನಾ ಸುಲಭ ಗೆಲುವು ಸಾಧಿಸಿದರು.

ವನಿತಾ ವಿಭಾಗದ ಮತ್ತೂಂದು ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಸಿಂಧು 21-10, 21-13ರಿಂದ ಡೆನ್ಮಾರ್ಕ್‌ನ ನತಾಲಿಯಾ ಕೋಚ್‌ ರೊದೆ ವಿರುದ್ಧ ಜಯ ಸಾಧಿಸಿದರು. ಎರಡೂ ಗೇಮ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು ಸುಲಭ ಜಯ ದಾಖಲಿಸಿದರು.

ಪ್ರಣಯ್‌ಗೆ ಸೋಲು
ಭಾರತದ ಭರವಸೆಯ ಆಟಗಾರ ಪ್ರಣಯ್‌ ತನಗಿಂತ ಚಿಕ್ಕ ವಯಸ್ಸಿನ ಶ್ರೇಯಸ್‌ ಜೈಸ್ವಾಲ್‌ ವಿರುದ್ಧ 4-21, 6-21ರಿಂದ ಭಾರೀ ಅಂತರದಲ್ಲಿ ಸೋಲುಂಡರು. ಪಂದ್ಯಕ್ಕೂ ಮುನ್ನ ಗಾಯವಾದ ಕಾರಣ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದು ಪ್ರಣಯ್‌ ತಿಳಿಸಿದ್ದಾರೆ.

Trending videos

Back to Top