CONNECT WITH US  

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಫೈನಲ್‌ನಲ್ಲಿ ಎಡವಿದ ಸಿಂಧು

ಹೊಸದಿಲ್ಲಿ: ಹಾಲಿ ಚಾಂಪಿಯನ್‌ ಪಿ.ವಿ. ಸಿಂಧು "ಇಂಡಿಯಾ ಓಪನ್‌' ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಎಡವಿ ರನ್ನರ್‌ ಅಪ್‌ ಸ್ಥಾನಕ್ಕೆ ಸಮಾಧಾನಪಟ್ಟಿದ್ದಾರೆ. ರವಿವಾರದ ಪ್ರಶಸ್ತಿ ಸೆಣಸಾಟದಲ್ಲಿ ಅವರು ಅಮೆರಿಕದ ಬೀವೆನ್‌ ಜಾಂಗ್‌ ವಿರುದ್ಧ ತೀವ್ರ ಹೋರಾಟ ನಡೆಸಿ 18-21, 21-11, 20-22 ಅಂತರದಿಂದ ಪರಾಭವಗೊಂಡರು.

ಜಾಂಗ್‌ ವಿರುದ್ಧ ಯಾವತ್ತೂ ಸುದೀರ್ಘ‌ ಹೋರಾಟ ನಡೆಸುವ ಸಿಂಧು, ಪಂದ್ಯವನ್ನು 3ನೇ ಗೇಮ್‌ಗೆ ಕೊಂಡೊಯ್ಯುವುದು ಸಾಮಾನ್ಯ. ರವಿವಾರದ ಫೈನಲ್‌ ಕೂಡ ಇದಕ್ಕೆ ಹೊರತಾಗಿರಲಿಲ್ಲ. 3ನೇ ಹಾಗೂ ನಿರ್ಣಾಯಕ ಗೇಮನ್ನು ಸ್ವಲ್ಪದರಲ್ಲೇ ಕಳೆದುಕೊಂಡನ ಸಿಂಧು ನಿರಾಸೆ ಅನುಭವಿಸಬೇಕಾಯಿತು.

ಪುರುಷರ ಸಿಂಗಲ್ಸ್‌ ಪ್ರಶಸ್ತಿ ಚೀನದ ಶಿ ಯುಖೀ ಪಾಲಾಯಿತು. ಅವರು ಥೈವಾನ್‌ನ ಚೊ ಟೀನ್‌ ಚೆನ್‌ ವಿರುದ್ಧ 21-18, 21-14 ಅಂತರದ ಜಯ ಸಾಧಿಸಿದರು.

Trending videos

Back to Top