ಮಗಳಿಗೆ ಜನ್ಮ, ಸೆರೆನಾಗೆ ಮರುಜನ್ಮ!
Team Udayavani, Feb 22, 2018, 6:40 AM IST
ನ್ಯೂಯಾರ್ಕ್: ಮಗಳು ಒಲಿಂಪಿಯಾಗೆ ಜನ್ಮ ನೀಡುವಾಗ ಬಹುತೇಕ ಸಾಯುವ ಸ್ಥಿತಿಗೆ ತಲುಪಿದ್ದೆ, ಈಗಲೂ ಅಪಾಯದಿಂದ ಪಾರಾಗಿಲ್ಲ ಎಂದು ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಸೆರೆನಾ, “ಒಲಿಂಪಿಯಾಗೆ ಜನ್ಮ ನೀಡುವ ವೇಳೆ ನನ್ನ ಶ್ವಾಸಕೋಶದಲ್ಲಿ ರಕ್ತಹೆಪ್ಪುಗಟ್ಟಿತ್ತು. ಇದರಿಂದ 6 ವಾರಗಳ ಕಾಲ ತೀವ್ರ ಸಂಕಟ ಅನುಭವಿಸಿದೆ. ಬಳಿಕ ಚೇತರಿಸಿಕೊಂಡೆ. 2011ರಲ್ಲೂ ಇಂಥದೇ ಒಂದು ಸಮಸ್ಯೆ ಆಗಿತ್ತು. ಆಗ ಕೂಡ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡಿತ್ತು. ಕಾಲಿಗೆ ಗಾಜಿನ ಚೂರು ತಾಗಿದ ನೋವು ಜೋರಾಯಿತು.
ಮೊದಲೇ ರಕ್ತಹೆಪ್ಪುಗಟ್ಟಿದ ಸಮಸ್ಯೆಗೆ ಒಳಗಾಗಿದ್ದ ನನಗೆ ಇದರಿಂದ ಚೇತರಿಸಿಕೊಳ್ಳಲು ಸುಮಾರು 12 ತಿಂಗಳು ಬೇಕಾಯಿತು. ಇದಾದ ಬಳಿಕ ಹೊಟ್ಟೆಯಲ್ಲೂ ರಕ್ತಹೆಪ್ಪುಗಟ್ಟಿರುವುದನ್ನು ವೈದ್ಯರು ಪತ್ತೆಹಚ್ಚಿರು. ಬಳಿಕ ಅವರ ಅಕ್ಕರೆಯ ಚಿಕಿತ್ಸೆಯ ನೆರವಿನಿಂದ ಚೇತರಿಸಿಕೊಂಡೆ. ಎಲ್ಲ ಸಂದರ್ಭದಲ್ಲೂ ವೈದ್ಯರು ನನ್ನ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ತೆಗೆದುಕೊಂಡಿದ್ದಾರೆ. ಅವರಿಲ್ಲದಿರುತ್ತಿದ್ದರೆ ಇಂದು ನಾನಿಲ್ಲಿ ಇರುತ್ತಿರಲಿಲ್ಲ’ ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?