ಮಹಾರಾಷ್ಟ್ರಕ್ಕೆ ಮಹಾಘಾತ; ಫೈನಲ್‌ಗೆ ಕರ್ನಾಟಕ


Team Udayavani, Feb 25, 2018, 6:35 AM IST

Vijay-Hazare-Trophy,-Mahara.jpg

ನವದೆಹಲಿ: ಕರ್ನಾಟಕದ ಸರ್ವಾಂಗೀಣ ಆಟಕ್ಕೆ ಸೊಲ್ಲೆತ್ತದೆ ಶರಣಾದ ಮಹಾರಾಷ್ಟ್ರ “ವಿಜಯ್‌ ಹಜಾರೆ’ ಟ್ರೋಫಿ ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತು ಕೂಟದಿಂದ ಹೊರಬಿದ್ದಿದೆ. 

ಕರುಣ್‌ ನಾಯರ್‌ ಪಡೆ 9 ವಿಕೆಟ್‌ಗಳ ಅಧಿಕಾರಯುತ ಜಯದೊಂದಿಗೆ ಪ್ರಶಸ್ತಿ ಸುತ್ತಿಗೆ ನೆಗೆದಿದೆ.”ಫಿರೋಜ್‌ ಷಾ ಕೋಟ್ಲಾ’ದಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್‌ ಸಂಪೂರ್ಣ ಏಕಪಕ್ಷೀಯವಾಗಿ ಸಾಗಿತು. 

ಮಹಾರಾಷ್ಟ್ರವನ್ನು ಬಿಗಿ ಮುಷ್ಟಿಯಲ್ಲಿ ಹಿಡಿದಿರಿಸಿದ ಕರ್ನಾಟಕ ತನ್ನ ಪ್ರಭುತ್ವವನ್ನು ಮುಂದುವರಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಮಹಾರಾಷ್ಟ್ರ ರಾಜ್ಯ ತಂಡದ ನಿಖರ ದಾಳಿಗೆ ತತ್ತರಿಸಿ 44.3 ಓವರ್‌ಗಳಲ್ಲಿ ಕೇವಲ 160 ರನ್ನಿಗೆ ಕುಸಿಯಿತು. ಅತ್ಯಂತ ಶಕ್ತಿಶಾಲಿ ಹಾಗೂ ಸಮರ್ಥ ಬ್ಯಾಟಿಂಗ್‌ ಸರದಿಯನ್ನು ಹೊಂದಿದ್ದ ಕರ್ನಾಟಕಕ್ಕೆ ಇದೊಂದು ಸವಾಲೇ ಆಗಿರಲಿಲ್ಲ. ಮಾಯಾಂಕ್‌ ಅಗರ್ವಾಲ್‌-ಕರುಣ್‌ ನಾಯರ್‌ ಇಬ್ಬರೇ ಸೇರಿಕೊಂಡು “ನೋಲಾಸ್‌’ ಜಯವನ್ನು ತಂದುಕೊಡುವ ಎಲ್ಲ ಸಾಧ್ಯತೆಯೂ ಇತ್ತು. ಆದರೆ ಗೆಲುವಿಗೆ ಇನ್ನೇನು ಆರೇ ರನ್‌ ಬೇಕೆನ್ನುವಾಗ ಅಗರ್ವಾಲ್‌ ಔಟಾದರು. 30.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 164 ರನ್‌ ಪೇರಿಸಿದ ಕರ್ನಾಟಕ ಅಮೋಘ ಗೆಲುವನ್ನು ಒಲಿಸಿಕೊಂಡಿತು.

ಭಾನುವಾರ ಇದೇ ಅಂಗಳದಲ್ಲಿ ಸೌರಾಷ್ಟ್ರ-ಆಂಧ್ರಪ್ರದೇಶ ನಡುವೆ 2ನೇ ಸೆಮಿಫೈನಲ್‌ ನಡೆಯಲಿದೆ. ಇಲ್ಲಿ ಗೆದ್ದ ತಂಡವನ್ನು ಕರ್ನಾಟಕ ಫೆ. 27ರ ಫೈನಲ್‌ನಲ್ಲಿ ಎದುರಿಸಲಿದೆ. ಈ ಪಂದ್ಯವೂ “ಕೋಟ್ಲಾ’ದಲ್ಲೇ ಸಾಗಲಿದೆ.

ಅಗರ್ವಾಲ್‌ ದಾಖಲೆ: ಪ್ರಸಕ್ತ ಸಾಲಿನ ಪ್ರಚಂಡ ಬ್ಯಾಟಿಂಗ್‌ ಫಾರ್ಮನ್ನು ಸೆಮಿಫೈನಲಿಗೂ ವಿಸ್ತರಿಸಿದ ಮಾಯಾಂಕ್‌ ಅಗರ್ವಾಲ್‌ ಅಮೋಘ ಆಟವಾಡಿ 81 ರನ್‌ ಬಾರಿಸಿದರು. ಇದರೊಂದಿಗೆ ವಿಜಯ್‌ ಹಜಾರೆ ಕ್ರಿಕೆಟ್‌ ಋತುವೊಂದರಲ್ಲಿ ಅತ್ಯಧಿಕ ರನ್‌ ಪೇರಿಸಿದ ದಾಖಲೆಗೆ ಅಗರ್ವಾಲ್‌ ಪಾತ್ರರಾದರು. ಅವರ ಒಟ್ಟು ಗಳಿಕೆ ಈಗ 633 ರನ್ನಿಗೆ ಏರಿದೆ. ಫೈನಲ್‌ನಲ್ಲಿ ಇದು ಇನ್ನಷ್ಟು ವಿಸ್ತರಿಸಲ್ಪಡುವ ಎಲ್ಲ ಸಾಧ್ಯತೆ ಇದೆ. ಎಡಗೈ ಸೀಮರ್‌ ದಿವ್ಯಾಂಗ್‌ ಎಸೆತವನ್ನು ಆಕರ್ಷಕ ಕವರ್‌ ಡ್ರೈವ್‌ ಮೂಲಕ ಬೌಂಡರಿಗೆ ಅಟ್ಟುವ ಮೂಲಕ ಅಗರ್ವಾಲ್‌ ತಮ್ಮ ಅರ್ಧ ಶತಕ ಹಾಗೂ 600 ರನ್‌ ಸಾಧನೆಯನ್ನು ಒಟ್ಟೊಟ್ಟಿಗೆ ದಾಖಲಿಸಿದರು.

ಒಟ್ಟು 86 ಎಸೆತ ಎದುರಿಸಿದ ಮಾಯಾಂಕ್‌ ಅಗರ್ವಾಲ್‌ 8 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿ ಮಹಾರಾಷ್ಟ್ರಕ್ಕೆ ಕಗ್ಗಂಟಾದರು. ಅಗರ್ವಾಲ್‌- ನಾಯರ್‌ ಜೋಡಿಯಿಂದ ಮೊದಲ ವಿಕೆಟಿಗೆ 28.2 ಓವರ್‌ಗಳಿಂದ 155 ರನ್‌ ಒಟ್ಟುಗೂಡಿತು. ನಾಯರ್‌ 70 ರನ್‌ ಬಾರಿಸಿ ಅಜೇಯರಾಗಿ ಉಳಿದರು. 90 ಎಸೆತಗಳ ಈ ರಂಜನೀಯ ಆಟದ ವೇಳೆ 10 ಬೌಂಡರಿ ಸಿಡಿಯಲ್ಪಟ್ಟಿತು. ಉರುಳಿದ ಏಕೈಕ ವಿಕೆಟ್‌ ಸತ್ಯಜೀತ್‌ ಬಚಾವ್‌ ಪಾಲಾಯಿತು. ಒಟ್ಟಾರೆಯಾಗಿ ಬ್ಯಾಟಿಂಗಿನಂತೆ ಮಹಾರಾಷ್ಟ್ರದ ಬೌಲಿಂಗ್‌ ಕೂಡ ಕಳೆಗುಂದಿತ್ತು.

ಕರ್ನಾಟಕ ಘಾತಕ ದಾಳಿ: ಕರ್ನಾಟಕ ಸಾಂ ಕ ಬೌಲಿಂಗ್‌ ದಾಳಿ ಮೂಲಕ ಮಹಾರಾಷ್ಟ್ರವನ್ನು ಕಾಡುತ್ತ ಹೋಯಿತು. ಪ್ರಸಿದ್ಧ್ ಕೃಷ್ಣ ಮೊದಲ ಓವರಿನಲ್ಲೇ ಆರಂಭಕಾರ ಗಾಯಕ್ವಾಡ್‌ (1) ವಿಕೆಟ್‌ ಕಿತ್ತು ಆಘಾತವಿಕ್ಕಿದರು. ಮತ್ತೂಬ್ಬ ಓಪನರ್‌ ಶ್ರೀಕಾಂತ್‌ ಮುಂಢೆ ಮತ್ತು ಮಧ್ಯಮ ಕ್ರಮಾಂಕದ ನೌಷಾದ್‌ ಶೇಖ್‌ ಒಂದಿಷ್ಟು ಹೋರಾಟ ತೋರಿದ್ದರಿಂದ ಸ್ಕೋರ್‌ 150ರ ಗಡಿ ದಾಟಿತು. ಮುಂಢೆ 50 ರನ್‌ (77 ಎಸೆತ, 5 ಬೌಂಡರಿ), ನೌಷಾದ್‌ 42 ರನ್‌ (58 ಎಸೆತ, 4 ಬೌಂಡರಿ) ಹೊಡೆದರು. ಕೊನೆಯ 8 ವಿಕೆಟ್‌ಗಳನ್ನು 65 ರನ್‌ ಅಂತರದಲ್ಲಿ ಉರುಳಿಸಿದ್ದು ಕರ್ನಾಟಕದ ಬೌಲಿಂಗ್‌ ಪರಾಕ್ರಮಕ್ಕೆ ಸಾಕ್ಷಿ.

ಕೆ. ಗೌತಮ್‌ 3 ವಿಕೆಟ್‌ ಕಿತ್ತರೆ, ಪ್ರಸಿದ್ಧ್ ಕೃಷ್ಣ 2 ವಿಕೆಟ್‌ ಉರುಳಿಸಿದರು. ಪ್ರದೀಪ್‌, ಮೋರೆ, ಗೋಪಾಲ್‌ ಒಂದೊಂದು ವಿಕೆಟ್‌ ಸಂಪಾದಿಸಿದರು. ಇಬ್ಬರು ರನೌಟಾದರು.

ಸ್ಕೋರ್‌ ವಿವರ
ಮಹಾರಾಷ್ಟ್ರ 44.3 ಓವರ್‌ಗೆ    160 ಆಲೌಟ್‌
ಋತುರಾಜ್‌ ಗಾಯಕ್ವಾಡ್‌    ಬಿ ಪ್ರಸಿದ್ಧ್ ಕೃಷ್ಣ    1
ಶಶಿಕಾಂತ್‌ ಮುಂಢೆ    ಸಿ ಗೋಪಾಲ್‌ ಬಿ ಮೋರೆ    50
ರಾಹುಲ್‌ ತ್ರಿಪಾಠಿ    ಸಿ ಗೌತಮ್‌ ಬಿ ಪ್ರದೀಪ್‌    16
ಅಂಕಿತ್‌ ಭವೆ°    ರನೌಟ್‌    18
ನೌಶಾದ್‌ ಶೇಖ್‌    ಸಿ ಅಗರ್ವಾಲ್‌ ಬಿ ಪ್ರಸಿದ್ಧ್ ಕೃಷ್ಣ    42
ಪ್ರಶಾಂತ್‌ ಕೋರೆ    ಸಿ ಸಮರ್ಥ್ ಬಿ ಕೆ.ಗೌತಮ್‌    8
ನಿಖೀಲ್‌ ನಾೖಕ್‌    ಸಿ ಗೌತಮ್‌ ಬಿ ಕೆ. ಗೌತಮ್‌    1
ದಿವ್ಯಾಂಗ್‌ ಹಿಂಗ್ನೇಕರ್‌    ಸಿ ಸಮರ್ಥ್ ಬಿ ಗೋಪಾಲ್‌    6
ಅನುಪಮ್‌ ಸಂಕ್ಲೇಚ    ರನೌಟ್‌    3
ಸತ್ಯಜೀತ್‌ ಬಚಾವ್‌    ಬಿ ಕೆ. ಗೌತಮ್‌    2
ಪ್ರದೀಪ್‌ ದಾಢೆ    ಔಟಾಗದೆ    0
ಇತರ        13
ವಿಕೆಟ್‌ ಪತನ: 1-2, 2-59, 3-95, 4-97, 5-115, 6-123, 7-137, 8-152, 9-160.
ಬೌಲಿಂಗ್‌
ಎಂ.ಪ್ರಸಿದ್ಧ್ ಕೃಷ್ಣ        7.3    0    26    2
ಟಿ.ಪ್ರದೀಪ್‌        10    2    38    1
ರೋನಿತ್‌ ಮೋರೆ        6    1    24    1
ಸ್ಟುವರ್ಟ್‌ ಬಿನ್ನಿ        3    0    14    0
ಕೃಷ್ಣಪ್ಪ ಗೌತಮ್‌        10    1    26    3
ಶ್ರೇಯಸ್‌ ಗೋಪಾಲ್‌        8    2    26    1
===
ಕರ್ನಾಟಕ 30.3 ಓವರ್‌ಗೆ 164/1
ಮಾಯಾಂಕ್‌ ಅಗರ್ವಾಲ್‌    ಸಿ ನಿಖೀಲ್‌ ಬಿ ಬಚಾವ್‌    81
ಕರುಣ್‌ ನಾಯರ್‌    ಔಟಾಗದೆ    70
ಆರ್‌. ಸಮರ್ಥ್    ಔಟಾಗದೆ    3
ಇತರೆ        10
ವಿಕೆಟ್‌ ಪತನ: 1-155.
ಬೌಲಿಂಗ್‌:
ಪ್ರದೀಪ್‌ ದಾಢೆ        4    0    30    0
ಅನುಪಮ್‌ ಸಂಕ್ಲೇಚ        6    0    33    0
ಸತ್ಯಜೀತ್‌ ಬಚಾವ್‌        9.3    1    32    1
ಶ್ರೀಕಾಂತ್‌ ಮುಂಢೆ        2    0    15    0
ಪ್ರಶಾಂತ್‌ ಕೋರೆ        7    0    36    0
ದಿವ್ಯಾಂಗ್‌ ಹಿಂಗ್ನೇಕರ್‌        2    0    15    0

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.