ಜಾಫ‌ರ್‌ ಜಬರ್ದಸ್ತ್ ದಾಖಲೆ : ಅಜೇಯ 285 ರನ್‌


Team Udayavani, Mar 16, 2018, 10:30 AM IST

Jafer-14-3.jpg

ನಾಗ್ಪುರ: ದೇಶಿ ಕ್ರಿಕೆಟಿನ ಬ್ಯಾಟಿಂಗ್‌ ಹೀರೋ ವಾಸಿಮ್‌ ಜಾಫ‌ರ್‌ ಗುರುವಾರ ನೂತನ ಮೈಲುಗಲ್ಲು ನೆಟ್ಟು ಇರಾನಿ ಟ್ರೋಫಿ ಪಂದ್ಯದಲ್ಲಿ ವಿದರ್ಭವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದರು. ಜಾಫ‌ರ್‌ 285 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದು, 2ನೇ ದಿನದಾಟದ ಅಂತ್ಯಕ್ಕೆ ವಿದರ್ಭ ಕೇವಲ 3 ವಿಕೆಟಿಗೆ 598 ರನ್‌ ರಾಶಿ ಹಾಕಿದೆ. ವೈಯಕ್ತಿಕ ಗಳಿಕೆ 160ಕ್ಕೆ ಏರಿದಾಗ ವಾಸಿಮ್‌ ಜಾಫ‌ರ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18 ಸಾವಿರ ರನ್‌ ಗಡಿ ದಾಟಿದರು. ಈ ಸಂದರ್ಭದಲ್ಲಿ ದಿಲೀಪ್‌ ವೆಂಗ್‌ಸರ್ಕಾರ್‌ (17,868) ಮತ್ತು ಜಿ.ಆರ್‌. ವಿಶ್ವನಾಥ್‌ (17,970) ಅವರ ದಾಖಲೆಯನ್ನು ಹಿಂದಿಕ್ಕಿದರು. ಭಾರತದ ಪ್ರಥಮ ದರ್ಜೆ ಸಾಧಕರ ಯಾದಿಯಲ್ಲಿ ಜಾಫ‌ರ್‌ಗೆ ಈಗ 6ನೇ ಸ್ಥಾನ.

200 ರನ್‌ ಪೂರ್ತಿಗೊಳಿಸಿದೊಡನೆ ಜಾಫ‌ರ್‌ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದರು; 40ರ ಹರೆಯದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತದ 5ನೇ ಬ್ಯಾಟ್ಸ್‌ ಮನ್‌ ಎನಿಸಿದರು. ಹಾಗೆಯೇ 40ರ ಹರೆಯದ ಬಳಿಕ 250 ರನ್‌ ಹೊಡೆದ ಏಶ್ಯದ ಮೊದಲ ಕ್ರಿಕೆಟಿಗನೆಂಬ ಹೆಗ್ಗ ಳಿಕೆಗೂ ಪಾತ್ರರಾದರು. ಗುರುವಾರಕ್ಕೆ ಜಾಫ‌ರ್‌ ವಯಸ್ಸು 40 ವರ್ಷ, 27 ದಿನ.


ವಿದರ್ಭ 2 ವಿಕೆಟಿಗೆ 289 ರನ್‌ ಮಾಡಿದಲ್ಲಿಂದ ಬ್ಯಾಟಿಂಗ್‌ ಮುಂದುವರಿಸಿತ್ತು. ಆಗ ಜಾಫ‌ರ್‌ 113 ಹಾಗೂ ಗಣೇಶ್‌ ಸತೀಶ್‌ 29 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಗುರುವಾರ ಗಣೇಶ್‌ ಸತೀಶ್‌ ಕೂಡ ಶತಕ ಸಂಭ್ರಮ ಆಚರಿಸಿದರು. ಸತೀಶ್‌ ಗಳಿಕೆ 120 ರನ್‌ (280 ಎಸೆತ, 10 ಬೌಂಡರಿ, 2 ಸಿಕ್ಸರ್‌). ಶೇಷ ಭಾರತಕ್ಕೆ 2ನೇ ದಿನದಾಟದಲ್ಲಿ ಲಭಿಸಿದ್ದು ಈ ಒಂದು ವಿಕೆಟ್‌ ಮಾತ್ರ. ಇದು ಸಿದ್ಧಾರ್ಥ್ ಕೌಲ್‌ ಪಾಲಾಯಿತು. ವಾಸಿಮ್‌ ಜಾಫ‌ರ್‌ 425 ಎಸೆತಗಳನ್ನು ಎದುರಿಸಿ ನಿಂತಿದ್ದು, 34 ಬೌಂಡರಿ ಜತೆಗೆ ಒಂದು ಸಿಕ್ಸರ್‌ ಬಾರಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಾಫ‌ರ್‌ ಬಾರಿಸಿದ 53ನೇ ಶತಕ. ಜಾಫ‌ರ್‌ – ಸತೀಶ್‌ 3ನೇ ವಿಕೆಟಿಗೆ 289 ರನ್‌ ಸೂರೆಗೈದರು.

ಟಾಪ್ ನ್ಯೂಸ್

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

Hockey

Hockey; ಕುಂಡ್ಯೋಳಂಡ ಟೂರ್ನಿ: ಕಣ್ಣಂಡ ತಂಡಕ್ಕೆ ಜಯ

1-weewqe

IPL; 89 ಕ್ಕೆ ಆಲೌಟಾದ ಟೈಟಾನ್ಸ್ ; ಡೆಲ್ಲಿಗೆ ಸುಲಭ ಜಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.