CONNECT WITH US  

ಸಿಂಧು ಸೆಮಿಗೆ

ಬರ್ಮಿಂಗಂ: ಅಮೋಘ ಹೋರಾಟ ಪ್ರದರ್ಶಿಸಿದ ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಿಂಧು ಮತ್ತು ಜಪಾನ್‌ ಆಟಗಾರ್ತಿ ನೊಜೊಮಿ ಒಕುಹರಾ ನಡುವೆ ಜಿದ್ದಾ ಜಿದ್ದಿ ಹೋರಾಟ ನಡೆಯಿತು. ಮೊದಲ ಗೇಮ್‌ ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಸಿಂಧು 20-22, 21-18, 21-18ರಿಂದ ಗೆದ್ದು ಬಂದರು. 3ನೇ ಗೇಮ್‌ನ ಒಂದು ಹಂತದಲ್ಲಿ ಸಿಂಧು 13-16ರಿಂದ ಹಿನ್ನಡೆಯಲ್ಲಿದ್ದರು. ಅನಂತರ ಭರ್ಜರಿ ಪ್ರದರ್ಶನ ನೀಡಿ ಎದುರಾಳಿಯ ಮೇಲೆ ನಿರಂತರ ಒತ್ತಡ ಹಾಕತೊಡಗಿದರು.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Trending videos

Back to Top