ಎಸಿಯು ವರದಿ ಬಳಿಕ ಶಮಿ ಐಪಿಎಲ್ ಭವಿಷ್ಯ ನಿರ್ಧಾರ
Team Udayavani, Mar 17, 2018, 6:00 AM IST
ಮುಂಬಯಿ: ಪತ್ನಿ ಯಿಂದಲೇ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಗಂಭೀರ ಸರಣಿ ಆರೋಪಗಳಿಂದ ತತ್ತರಿಸಿರುವ ಭಾರತದ ವೇಗಿ ಮೊಹಮ್ಮದ್ ಶಮಿ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಘಟನೆಗೆ ಸಂಬಂಧಿಸಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ (ಎಸಿಯು) ಮುಖ್ಯಸ್ಥ ನೀರಜ್ ಕುಮಾರ್ ವರದಿ ಒಪ್ಪಿಸಿದ ಬಳಿಕವೇ ಶಮಿಯ ಐಪಿಎಲ್ ಭಾಗವಹಿಸುವಿಕೆ ಬಗ್ಗೆ ನಿರ್ಧರಿಸಲಾಗುವುದೆಂದು ಸುಪ್ರೀಂ ಕೋರ್ಟ್ ಆಡಳಿತ ಸಮಿತಿ (ಸಿಒಎ) ಹೇಳಿದೆ.
ಮೊಹಮ್ಮದ್ ಶಮಿ 11ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರ ಆಡುವ ಬಗ್ಗೆ ಈಗಲೇ ನಿರ್ಧರಿಸಲಾಗದು. ಎಸಿಯು ವರದಿ ಬಂದ ಬಳಿಕವೇ ಅದನ್ನು ನಿರ್ಧರಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.