ಸೈನಾ, ಸಿಂಧು ದ್ವಿತೀಯ ಸುತ್ತಿಗೆ
Team Udayavani, Apr 26, 2018, 6:00 AM IST
ವುಹಾನ್ (ಚೀನ): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅಮೋಘ ನಿರ್ವಹಣೆಯ ಬಳಿಕ ಭಾರತೀಯ ಶಟ್ಲರ್ಗಳಾದಕಾಮನ್ವೆಲ್ತ್ ಗೇಮ್ಸ್ಮತ್ತು ಕಿದಂಬಿ ಶ್ರೀಕಾಂತ್ ಅವರು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ.
ಸೈನಾ ಮತ್ತು ಸಿಂಧು ನೇರ ಗೇಮ್ಗಳ ಜಯದೊಂದಿಗೆ ದ್ವಿತೀಯ ಸುತ್ತಿಗೇರಿದರೆ ಶ್ರೀಕಾಂತ್ ಕಠಿನ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರು. ಸೈನಾ ಸಿಂಗಾಪುರದ ಯಿಯೊ ಜಿಯಾ ಮಿನ್ ಅವರನ್ನು 21-12, 21-9 ಗೇಮ್ಗಳಿಂದ ಮಣಿಸಿದರೆ ಸಿಂಧು ಚೈನೀಸ್ ತೈಪೆಯ ಪೈ ಯು ಪೊ ಅವರನ್ನು 21-14, 21-19 ಗೇಮ್ಗಳಿಂದ ಉರುಳಿಸಿದರು.
ಮಾಜಿ ನಂ. ವನ್ ಸೈನಾ ಮುಂದಿನ ಸುತ್ತಿನಲ್ಲಿ ಚೀನದ ಗಾವೊ ಫ್ಯಾಂಗ್ಝೀ ಹಾಗೂ ಸಿಂಧು ಚೀನದ ಇನ್ನೋರ್ವ ತಾರೆ ಚೆನ್ ಕ್ಸಿಯೊಕ್ಸಿನ್ ಅವರನ್ನು ಎದುರಿಸಲಿದ್ದಾರೆ. ಅಗ್ರ ಶ್ರೇಯಾಂಕದ ಶ್ರೀಕಾಂತ್ ಮೊದಲ ಗೇಮ್ ಕಳೆದುಕೊಂಡರೂ ಜಪಾನಿನ ಕೆಂಟ ನಿಶಿಮೊಟೊ ಅವರನ್ನು 13-21. 21-16, 21-16 ಗೇಮ್ಗಳಿಂದ ಉರುಳಿಸಲು ಯಶಸ್ವಿಯಾದರು. ದ್ವಿತೀಯ ಸುತ್ತಿನಲ್ಲಿ ಅವರು ಹಾಂಕಾಂಗ್ನ ವಾಂಗ್ ವಾಂಗ್ ಕಿ ವಿನ್ಸೆಂಟ್ ಅವರನ್ನು ಎದುರಿಸಲಿದ್ದಾರೆ.
ಆದರೆ ಸಮೀರ್ ವರ್ಮ ಮೊದಲ ಸುತ್ತಿನಲ್ಲಿಯೇ ಸೋತು ಹೊರಬಿದ್ದಿದ್ದಾರೆ. ಅವರು ಚೈನೀಸ್ ತೈಪೆಯ ಚೋ ತಿಯಾನ್ ಚೆನ್ ಅವರಿಗೆ 21-23, 17-21 ಗೇಮ್ಗಳಿಂದ ಶರಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ