ಉದ್ದೀಪನ: ಪಾಕ್ ಕ್ರಿಕೆಟಿಗ ಶೆಹಜಾದ್ಗೆ ನಿಷೇಧ ಭೀತಿ
Team Udayavani, Jun 22, 2018, 11:55 AM IST
ಇಸ್ಲಾಮಾಬಾದ್: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ನ ಆರಂಭಿಕ ಆಟ ಗಾರ ಅಹ್ಮದ್ ಶೆಹಜಾದ್,ಉದ್ದೀಪನಾ ಮದ್ದು ಸೇವಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಏಪ್ರಿಲ್ 19ರಿಂದ ಮೇ 1ರವರೆಗೆ ಪಾಕಿಸ್ತಾನದಲ್ಲಿ ನಡೆದಿದ್ದ “ಪಾಕಿಸ್ತಾನ್ ಕಪ್’ ಏಕದಿನ ಟೂರ್ನಿಯ ವೇಳೆ ಅವರಿಂದ ಪಡೆಯಲಾಗಿದ್ದ ರಕ್ತ ಹಾಗೂ ಮೂತ್ರದ ಮಾದರಿಗಳಲ್ಲಿ ನಿಷೇಧಿತ ಉದ್ದೀಪನ ಪತ್ತೆಯಾಗಿರುವು ದಾಗಿ ಜಿಯೋ ನ್ಯೂಸ್ ತಿಳಿಸಿದೆ.
ಅವರಿಗೆ ಮೂರು ತಿಂಗಳು ನಿಷೇಧ ಹೇರುವ ಸಾಧ್ಯತೆಯಿದೆ. ಪಾಕಿಸ್ತಾನ ಕಪ್ನಲ್ಲಿ ಖೈಬರ್ ಪಖ್ತುಂಕ್ವಾ ಪರವಾಗಿ ಆಡಿದ್ದ ಶೆಹಜಾದ್,ಒಂದು ಶತಕ, ಎರಡು ಅರ್ಧಶತಕ ಸಹಿತ 372 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರ ರಾಗಿದ್ದರು.