CONNECT WITH US  

ಸಿಂಧು ಮುನ್ನಡೆ, ಶ್ರೀಕಾಂತ್‌ಗೆ ಆಘಾತ

ಜಕಾರ್ತಾ: ಇಂಡೋನೇಶ್ಯ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲೇ ಭಾರತದ ಕಿದಂಬಿ ಶ್ರೀಕಾಂತ್‌ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಆದರೆ ಪಿ.ವಿ. ಸಿಂಧು ಪ್ರೀ-ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಶ್ರೀಕಾಂತ್‌ ಜಪಾನಿನ ಕೆಂಟೊ ಮೊಮೊಟ ವಿರುದ್ಧ 21-12, 14-21, 15-21 ಸೋಲುಂಡರು.  ಪಿ.ವಿ. ಸಿಂಧು ಥಾಯ್ಲೆಂಡಿನ ಪೊರ್ನಪವಿ ಚೊಚುವಾಂಗ್‌ ಅವರನ್ನು 21-15, 19-21, 21-13ರಿಂದ ಮಣಿಸಿದರು. ಗುರುವಾರ ಸಿಂಧು ಅವರ 23ನೇ ಜನ್ಮದಿನವಾಗಿದ್ದು, ಅಂದೇ ಜಪಾನಿನ ಅಯಾ ಒಹೊರಿ ವಿರುದ್ಧ ಆಡಲಿದ್ದಾರೆ. 


Trending videos

Back to Top