CONNECT WITH US  

ಮಾಧ್ಯಮಗಳಿಂದ ದೂರವಿರಲು ಸೂಚಿಸಿದ ಧೋನಿ'

ಹೊಸದಿಲ್ಲಿ: ತಾನು ಭಾರತ ತಂಡಕ್ಕೆ ಆಯ್ಕೆಯಾದೊಡನೆಯೇ ಮಹೇಂದ್ರ ಸಿಂಗ್‌ ಧೋನಿ ಮಾಧ್ಯಮಗಳಿಂದ ದೂರ ಇರುವಂತೆ ಸೂಚಿಸಿದ್ದರು ಎಂಬುದಾಗಿ ಉದಯೋನ್ಮುಖ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

"ಯಾವುದೇ ದಿನಪತ್ರಿಕೆಯನ್ನು ಓದಬೇಡ. ಹಾಗೆಯೇ ಸಾಮಾಜಿಕ ಜಾಲತಾಣಗಳಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸು. ಇದರಿಂದ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ...' ಎಂಬುದಾಗಿ ಧೋನಿ ಸೂಚಿಸಿದ್ದರು ಎಂದು ಶ್ರೇಯಸ್‌ ಅಯ್ಯರ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ಮಾಧ್ಯಮಗಳೆಲ್ಲ ನಮ್ಮ ಬದುಕಿನ ಅವಿಭಾಜ್ಯ ಅಂಗಗಳೇ ಆಗಿವೆ. ಇದರಿಂದ ದೂರವಿರಲು ನಾನು ಪ್ರಯತ್ನಿಸುತ್ತಿದ್ದೇನೆ' ಎಂದು ಅಯ್ಯರ್‌ ಹೇಳಿದರು.

Trending videos

Back to Top