CONNECT WITH US  

ಚಿನ್ನ ಕಳೆದುಕೊಂಡಿಲ್ಲ,ಬೆಳ್ಳಿ ಉಳಿಸಿಕೊಂಡಿದ್ದೇನೆ: ಸಿಂಧು

ಹೈದರಾಬಾದ್‌: ಪ್ರತೀ ಸಲವೂ ಪ್ರಮುಖ ಫೈನಲ್‌ ಸ್ಪರ್ಧೆಗಳಲ್ಲಿ ಸೋಲುವ ಕುರಿತಂತೆ ಎದುರಾಗಿರುವ ಟೀಕೆಗಳಿಗೆ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ದಿಟ್ಟ ಉತ್ತರ ನೀಡಿದ್ದಾರೆ.

ಇನ್‌ಸ್ಟಾಮ್‌ಗ್ರಾಮ್‌ನಲ್ಲಿ ತಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಪದಕದ ಚಿತ್ರದ ಜತೆಗೆ ಡಗ್‌ ವಿಲಿಯಮ್ಸ್‌ ಅವರ "ಕೈಲಾಗದು ಎಂದು ಯಾವತ್ತೂ ಬಿಟ್ಟುಕೊಡುವುದಿಲ್ಲ. ನಾvu ಗೆದ್ದರೂ ಸೋತರೂ ಘನತೆಯಿಂದಲೇ ಇದನ್ನು ಸ್ವೀಕರಿಸುತ್ತೇವೆ' ಎಂಬ ಸಾಲುಗಳನ್ನು ಉಲ್ಲೇಖೀಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಧು, "ನಾನೇನೂ ಚಿನ್ನದ ಪದಕವನ್ನು ಕಳೆದುಕೊಂಡಿಲ್ಲ. ಬೆಳ್ಳಿ ಪದಕವನ್ನು ಉಳಿಸಿಕೊಂಡ ಸಾಧನೆ ಮಾಡಿದ್ದೇನೆ. ಇದಕ್ಕಾಗಿ ಬಹಳ ಹೆಮ್ಮೆಪಡುತ್ತೇನೆ. 

ಫೈನಲ್‌ನಲ್ಲಿ ಸೋತರೂ ಕೆಲವು ಅಮೋಘ ಪಂದ್ಯಗಳನ್ನು ಡುವ ಅವಕಾಶ ನನಗೆ ಲಭಿಸಿತು. ತಾಳ್ಮೆ ಹಾಗೂ ನಿರಂತೆಯೇ ಯಶಸ್ಸಿನ ಮೂಲಮಂತ್ರ ಎಂಬುದು ನನ್ನ ನಂಬಿಕೆ. ಚಿನ್ನದ ಪದಕ ಬಹಳ ಬೇಗನೇ ಸಿಗುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ನನ್ನ ತಂಡಕ್ಕೆ, ಮುಖ್ಯವಾಗಿ ಫಿಸಿಯೋ, ನನ್ನೆಲ್ಲ ತರಬೇತುದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ' ಎಂದು ಸಿಂಧು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Trending videos

Back to Top