CONNECT WITH US  

ರೋಜರ್  ಕಪ್‌: ಗ್ರೀಕ್‌ ಟೆನಿಸಿಗನಿಗೆ ಸೋತ ಜೊಕೋ

ಟೊರಂಟೊ: ವಿಂಬಲ್ಡನ್‌ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ "ರೋಜರ್ ಕಪ್‌' ಟೆನಿಸ್‌ ಪಂದ್ಯಾವಳಿಯಲ್ಲಿ ಗ್ರೀಕ್‌ನ 19ರ ಹರೆಯದ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ ಆಘಾತಕಾರಿ ಸೋಲುಂಡು ಕೂಟದಿಂದ ನಿರ್ಗಮಿಸಿದ್ದಾರೆ. ಗುರುವಾರ ರಾತ್ರಿ ನಡೆದ ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಿಸಿಪಸ್‌ 6-3, 6-7 (5), 6-3 ಅಂತರದ ಅಮೋಘ ಗೆಲುವು ಸಾಧಿಸಿದರು.

ಸಿಸಿಪಸ್‌ ಅವರಿನ್ನು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಆಡಲಿದ್ದಾರೆ. 21ರ ಹರೆಯದ ಜ್ವೆರೇವ್‌ ರಶ್ಯದ ಡ್ಯಾನಿಲ್‌ ಮೆಡ್ವೆಡೇವ್‌ಗೆ 6-3, 6-2 ಅಂತರದ ಸೋಲುಣಿಸಿದರು. ಇದು ಒಂದು ವಾರದ ಅವಧಿಯಲ್ಲಿ ಜ್ವೆರೇವ್‌-ಸಿಸಿಪಸ್‌ ನಡುವಿನ 2ನೇ ಮುಖಾಮುಖೀ ಯಾಗಿದೆ. ಕಳೆದ ವಾಷಿಂಗ್ಟನ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಸಿಸಿಪಸ್‌ ವಿರುದ್ಧ ಜ್ವೆರೇವ್‌ ಜಯ ಸಾಧಿಸಿದ್ದರು. 

ವಾವ್ರಿಂಕಾಗೆ ನಡಾಲ್‌ ಹೊಡೆತ
ಸ್ವಿಜರ್‌ಲ್ಯಾಂಡ್‌ನ‌ ಸ್ಟಾನಿಸ್ಲಾಸ್‌ ವಾವ್ರಿಂಕ ಕೂಡ ಕೂಟದಿಂದ ಹೊರಬಿದ್ದಿದ್ದಾರೆ. ಅವರನ್ನು ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌ 7-5, 7-6 (4) ಅಂತರದಿಂದ ಸೋಲಿಸಿದರು. ಮೊದಲ ಸೆಟ್‌ ವೇಳೆ ಮಳೆ ಸುರಿದುದರಿಂದ ಪಂದ್ಯ ವಿಳಂಬಗೊಂಡಿತ್ತು. ನಡಾಲ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಕ್ರೊವೇಶಿಯಾದ ಮರಿನ್‌ ಸಿಲಿಕ್‌.

Trending videos

Back to Top