ಭಾರತದ ಸುದೀರ್ಘ ದಾಖಲೆ
Team Udayavani, Aug 16, 2018, 6:00 AM IST
ಏಶ್ಯನ್ ಗೇಮ್ಸ್ನಲ್ಲಿ ಭಾರತದ ಸುದೀರ್ಘ ದಾಖಲೆ ಯಾರ ಹೆಸರಲ್ಲಿದೆ? ಇದೊಂದು ಕೌತುಕದ ಪ್ರಶ್ನೆ. ಇದಕ್ಕೆ ಉತ್ತರವಾಗುವವರು ಟ್ರಿಪಲ್ ಜಂಪರ್ ಮೊಹಿಂದರ್ ಸಿಂಗ್. 1958ರ ಟೋಕಿಯೊ ಏಶ್ಯನ್ ಗೇಮ್ಸ್ನಲ್ಲಿ ಅವರು 15.62 ಮೀ. ಸಾಧನೆಯೊಂದಿಗೆ ಈ ದಾಖಲೆ ನಿರ್ಮಿಸಿದ್ದರು. 1962ರ ಏಶ್ಯಾಡ್ನಲ್ಲಿ ಈ ದಾಖಲೆಯನ್ನು ಯಾರೂ ಮುರಿಯಲಿಲ್ಲ. 1966ರಲ್ಲಿ ಇದನ್ನು ಮುರಿಯಲು ಮತ್ತೂಬ್ಬ “ಮೊಹಿಂದರ್’ ಬರಬೇಕಾಯಿತು. ಅವರೇ ಮೊಹಿಂದರ್ ಸಿಂಗ್ ಗಿಲ್. 16.11 ಮೀ. ಸಾಧನೆಯೊಂದಿಗೆ ಮೊಹಿಂದರ್ ಸಿಂಗ್ ಅವರ ದಾಖಲೆಯನ್ನು ಗಿಲ್ ಮುರಿದರು. ಸುದೀರ್ಘಾವಧಿಯ ಏಶ್ಯಾಡ್ ದಾಖಲೆ ಚೀನದ ವನಿತಾ ಲಾಂಗ್ಜಂಪರ್ ಯಾವೊ ವೀಲಿ ಹೆಸರಲ್ಲಿದೆ. 1994ರ ಹಿರೋಶಿಮಾ ಕೂಟದಲ್ಲಿ ವೀಲಿ 6.91 ಮೀ. ದೂರ ನೆಗೆದು ದಾಖಲೆ ನಿರ್ಮಿಸಿದ್ದರು. ಇದು ಇಂದಿಗೂ ಅಜೇಯವಾಗಿ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ