ಭಾರತದ ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಅಭಿನಂದನೆ
Team Udayavani, Aug 19, 2018, 10:27 AM IST
ಹೊಸದಿಲ್ಲಿ: ಜಕಾರ್ತಾ ಏಶ್ಯಾಡ್ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇವರೆಲ್ಲ ಕೂಟದುದ್ದಕ್ಕೂ ಅತ್ಯುತ್ತಮ ಸಾಧನೆಗೈಯುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.
“ಇಂಡೋನೇಶ್ಯದಲ್ಲಿ ಆರಂಭಗೊಂಡಿರುವ 2018ರ ಏಶ್ಯಾಡ್ನಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ನನ್ನ ಶುಭ ಹಾರೈಕೆಗಳು. ಇವರ ಬಗ್ಗೆ ನಮಗೆಲ್ಲ ಬಹಳ ಹೆಮ್ಮೆಯಾಗುತ್ತಿದೆ. ನಮ್ಮ ಕ್ರೀಡಾಳುಗಳು ಪಂದ್ಯಾವಳಿಯುದ್ದಕ್ಕೂ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡುವರೆಂಬ ನಂಬಿಕೆ ನನ್ನದು’ ಎಂಬುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.