CONNECT WITH US  

ಈಜು: ಖಾಡೆಗೆ ಕೈತಪ್ಪಿದ ಕಂಚು

ಜಕಾರ್ತಾ: ಏಶ್ಯನ್‌ ಗೇಮ್ಸ್‌ನ ಪುರುಷರ ವಿಭಾಗದ 50ಮೀ. ಫ್ರಿಸ್ಟೈಲ್‌ ಈಜು ಫೈನಲ್‌ ಸ್ಪರ್ಧೆಯಲ್ಲಿ ಭಾರತದ ವೀರ್‌ಧವಳ್‌ ಖಾಡೆ ಕೇವಲ ಒಂದು ಸೆಕೆಂಡ್‌ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು. ಮಂಗಳವಾರ ನಡೆದ ಹೀಟ್‌ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಖಾಡೆ 22.43 ಸೆಕೆಂಡ್‌ಗಳಲ್ಲಿ ಈಜಿ ಫೈನಲ್‌ ಪ್ರವೇಶಿಸಿದ್ದರು. ಆದರೆ, ಫೈನಲ್‌ನಲ್ಲಿ  22.47 ಸೆಕೆಂಡ್‌ಗಳಲ್ಲಿ ಈಜಿ ದಡ ಸೇರಿದ ಖಾಡೆ ನಾಲ್ಕನೇ ಸ್ಥಾನ ಪಡೆದರು. 

ಚೀನದ ಯು ಹೆಕ್ಸಿನ್‌ (22.11) ಚಿನ್ನ‌, ಜಪಾನ್‌ನ ನಕಾಮುರ ಕುಸ್ಟುಮಿ (22.20) ಬೆಳ್ಳಿ ಮತ್ತು ಕೊರಿಯಾದ ನಾಕೋ ಶುನಿಚಿ (22.46)ಕಂಚಿನ ಪದಕ ಪಡೆದರು.  ಖಾಡೆ 2010ರ ಏಶ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ಸ್ಪರ್ಧೆಯ ಹೀಟ್‌ ವಿಭಾಗದಲ್ಲಿ 22.43 ಸೆಕೆಂಡ್‌ಗಳಲ್ಲಿ ಈಜಿದ ಖಾಡೆ ತಮ್ಮ ರಾಷ್ಟ್ರೀಯ ದಾಖಲೆ ಉತ್ತಮಗೊಳಿಸಿದ್ದರು. ಅವರು 2009ರಲ್ಲಿ ಜಪಾನ್‌ನಲ್ಲಿ ನಡೆದ ಏಶ್ಯನ್‌ ಏಜ್‌ ಗ್ರೂಪ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ  22.52 ಸೆಕೆಂಡ್‌ಗಳಲ್ಲಿ ಈಜಿ ರಾಷ್ಟ್ರೀಯ ದಾಖಲೆ ಬರೆದಿದ್ದರು. 

Trending videos

Back to Top