ವುಶು ಭಾರತಕ್ಕೆ ನಾಲ್ಕು ಕಂಚು
Team Udayavani, Aug 23, 2018, 6:00 AM IST
ಪಾಲೆಂಬಂಗ್: ಏಶ್ಯನ್ ಗೇಮ್ಸ್ ಚೀನಾ ವುಶು ಸ್ಪರ್ಧೆಯ ಪುರುಷರ ಸಿಂಗಲ್ಸ್ನಲ್ಲಿ 3 ಹಾಗೂ ಮಹಿಳಾ ಸಿಂಗಲ್ಸ್ನಲ್ಲಿ 1 ಪದಕದೊಂದಿಗೆ ಒಂದೇ ದಿನ ಭಾರತೀಯ ವುಶು ಸ್ಪರ್ಧಿಗಳು ಒಟ್ಟು ನಾಲ್ಕು ಕಂಚಿನ ಪದಕ ಗೆದ್ದಿದ್ದಾರೆ.
ನಾಲ್ಕೂ ಸ್ಪರ್ಧಿಗಳು ಕೂಡ ಮಂಗಳವಾರ ಸೆಮಿಫೈನಲ್ ಪ್ರವೇಶಿಸಿ ಕಂಚಿನ ಪದಕ ಖಚಿತಪಡಿಸಿದ್ದರು. ಆದರೆ ಸೆಮಿಫೈನಲ್ನಲ್ಲಿ ಎಲ್ಲರೂ ಸೋತು ಬೆಳ್ಳಿ ಅಥವಾ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು. ವನಿತೆಯರ 60 ಕೆ.ಜಿ. ವಿಭಾಗದ ಸೆಮಿಫೈನಲ್ನಲ್ಲಿ ರೊಶ್ಬಿನಾ ದೇವಿ 0-1 ಅಂತರದಿಂದ ಚೀನದ ಯಿಂಗ್ಯಿಂಗ್ ಕಾಯ್ ವಿರುದ್ಧ ಸೋಲು ಅನುಭವಿಸಿದರು. ಪುರುಷರ 56 ಕೆ.ಜಿ. ವಿಭಾಗದ ಸೆಮಿಫೈನಲ್ನಲ್ಲಿ ಸಂತೋಷ್ ಕುಮಾರ್ 0-2ರಿಂದ ವಿಯೆಟ್ನಾಂ ಸ್ಪರ್ಧಿ ಗಿಯಾಂಗ್ಗೆ ಶರಣಾದರು.
ಪುರುಷರ 60 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸೂರ್ಯ ಭಾನು ಪ್ರತಾಪ್ 0-2 ಅಂತರದಿಂದ ಇರಾನ್ನ ಇರ್ಫಾನ್ ವಿರುದ್ಧ ಸೋಲು ಅನುಭವಿಸಿದರು. ಪುರುಷರ 65 ಕೆ.ಜಿ. ವಿಭಾಗದ ಸೆಮಿಫೈನಲ್ನಲ್ಲಿ ನರೇಂದ್ರ ಗ್ರೇವಲ್ 2-0 ಅಂತರದಿಂದ ಇರಾನ್ನ ಫಾರೋದ್ ವಿರುದ್ಧ ಸೋಲು ಅನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ