CONNECT WITH US  

ಇರಾನ್‌ ಗೆಲುವಿನ ರೂವಾರಿ ಭಾರತೀಯ ಕೋಚ್‌

ಜಕಾರ್ತಾ: ಏಶ್ಯನ್‌ ಗೇಮ್ಸ್‌ನ ಕಬಡ್ಡಿ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಇರಾನ್‌ ಚಿನ್ನದ ಪದಕ ಬಾಚಿದೆ. ಈ ಅತ್ಯುತ್ತಮ ಪ್ರದರ್ಶನದ ಹಿಂದಿರುವ ಕೈ ಭಾರತೀಯ ಕೋಚ್‌ನದ್ದು. ಹೌದು ಇರಾನ್‌ ಕಬಡ್ಡಿ ತಂಡ ತಯಾರಾಗಿದ್ದು ಭಾರತದ ಕೋಚ್‌ ಶೈಲಜಾ ಜೈನ್‌ ಅವರ ತರಬೇತಿಯಲ್ಲಿ. "ನಾನು ಈ ಕೆಲಸಕ್ಕಾಗಿ ಯಾವಾಗ ಇರಾನ್‌ಗೆ ಭೇಟಿ ನೀಡಿದೆನೋ ಅಂದೇ ನಾನು ಉತ್ತಮ ಕೋಚ್‌ ಎಂದು ಸಾಬೀತುಪಡಿಸುವುದು ನನ್ನ ಗುರಿ ಎಂದು ಹೇಳಿದ್ದೆ. ಈಗ ನಮ್ಮ ಎದುರು ಫ‌ಲಿತಾಂಶವಿದೆ' ಎಂದು ಶೈಲಜಾ ತಿಳಿಸಿದ್ದಾರೆ. 

ಏಶ್ಯಾಡ್‌ನ‌ಲ್ಲಿ ವನಿತೆಯರ ಕಬಡ್ಡಿ ಸೇರ್ಪಡೆಯಾದ ಬಳಿಕ ಚಿನ್ನ ಗೆಲ್ಲುತ್ತ ಬಂದಿದ್ದ ಭಾರತದ ವನಿತೆಯರ ತಂಡ ಇದೇ ಮೊದಲ ಬಾರಿ ಚಿನ್ನವಿಲ್ಲದೆ ಭಾರತಕ್ಕೆ ಮರಳಿದೆ. ಇರಾನ್‌ ಇದೇ ಮೊದಲ ಬಾರಿ ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದೆ.


Trending videos

Back to Top