CONNECT WITH US  

ಕ್ವಾ. ಫೈನಲ್‌ಗೆ ಸರ್ಜುಬಾಲಾ ದೇವಿ

ಜಕಾರ್ತಾ: ಏಶ್ಯನ್‌ ಗೇಮ್ಸ್‌ನ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಮಾಜಿ ವಿಶ್ವ ಬೆಳ್ಳಿ ಪದಕ ವಿಜೇತೆ ಸರ್ಜುಬಾಲಾ ದೇವಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮನೋಜ್‌ ಕುಮಾರ್‌ 2ನೇ ಸುತ್ತಿನಲ್ಲಿ  ಸೋತು ಸ್ಪರ್ಧೆಯಿಂದ ಹೊರನಡೆದಿದ್ದಾರೆ. 

ವನಿತೆಯರ ಫ್ಲೈವೇಟ್‌ 51 ಕೆ.ಜಿ. ವಿಭಾಗದಲ್ಲಿ  ಸ್ಪರ್ಧಿಸಿದ ಸರ್ಜು ಬಾಲಾ ದೇವಿ ಅವರು ತಜಕೀಸ್ಥಾನದ ಮದೀನಾ ಗಫೊರೋವಾ ಅವರನ್ನು  5-0 ಅಂತರದಿಂದ ಸೋಲಿಸಿದರು. ಆರಂಭದಿಂದಲೂ ಪ್ರತಿಸ್ಪರ್ಧಿಗೆ ಹೊಡೆತ ನೀಡುತ್ತ ಸರ್ಜುಬಾಲಾ ಮುನ್ನಡೆ ಕಾಯ್ದುಕೊಂಡರು. ಜತೆಗೆ ಪ್ರತಿಸ್ಪರ್ಧಿಗೆ ಯಾವುದೇ ಅಂಕಗಳನ್ನು ನೀಡದೆ ರಕ್ಷಣಾತ್ಮಕ ಆಟವಾಡಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.

ಪುರುಷರ ವಾಲ್ಟರ್‌ವೆàಟ್‌ 69 ಕೆ.ಜಿ. ಸ್ಪರ್ಧೆಯ 16ನೇ ಸುತ್ತಿನಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಪದಕ ವಿಜೇತ ಮನೋಜ್‌ ಕುಮಾರ್‌ ಕಿರ್ಗಿಸ್ಥಾನದ ಅಬ್ದುರಕ್ಮನ್‌ ಅಬ್ದುರಕ್ಮನೊವ್‌ ಅವರ ವಿರುದ್ಧ ಸೋತರು.

ಮತ್ತೂಬ್ಬ ಬಾಕ್ಸರ್‌ ಶಿವ ಥಾಪ 60 ಕೆಜಿ ಲೈಟ್‌ವೇಟ್‌ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಚೀನದ ಶಾನ್‌ ಜುನ್‌ ವಿರುದ್ಧ ಸೋತರು.

Trending videos

Back to Top