CONNECT WITH US  

ಬಾಕ್ಸಿಂಗ್‌: ಫೈನಲ್‌ ತಲುಪಿದ ಅಮಿತ್‌ ಪಾಂಗಾಲ್‌

ಜಕಾರ್ತಾ: ಭಾರತದ ಬಾಕ್ಸರ್‌ ಅಮಿತ್‌ ಪಾಂಗಾಲ್‌ ಏಶ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಖಾತ್ರಿ ಪಡಿಸಿದ್ದಾರೆ. ಶುಕ್ರವಾರ ನಡೆದ 49 ಕೆಜಿ ಲೈಟ್‌ ಫ್ಲೈ ವಿಭಾಗದ ಸೆಮಿಯಲ್ಲಿ ಅವರು ಫಿಲಿಪ್ಪೀನ್ಸ್‌ನ ಕಾರ್ಲೊ ಪಾಲಮ್‌ ವಿರುದ್ಧ 3-2 ಅಂತರದ ರೋಚಕ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇರಿಸಿದರು.
ಪ್ರಸಕ್ತ ಏಶ್ಯಾಡ್‌ ಬಾಕ್ಸಿಂಗ್‌ನಲ್ಲಿ ಫೈನಲ್‌ ತಲುಪಿದ ಭಾರತದ ಏಕೈಕ ಬಾಕ್ಸರ್‌ ಎಂಬುದು ಅಮಿತ್‌ ಪಾಂಗಾಲ್‌ ಪಾಲಿನ ಹೆಗ್ಗಳಿಕೆ.  

ಪಾಲಮ್‌ ವಿರುದ್ಧ ಸಾಮಾನ್ಯ ಮಟ್ಟದ ಆರಂಭ ಪಡೆದ ಅಮಿತ್‌, ಬಳಿಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಪಾಲಮ್‌ ಆಕ್ರಮಣಕಾರಿಯಾಗಿ ಮುನ್ನುಗ್ಗಿದರೆ, "ಆರ್ಮಿ ಮ್ಯಾನ್‌' ಅಮಿತ್‌ ಬಳಿಕ ಹೋರಾಟವನ್ನು ತೀವ್ರಗೊಳಿಸಿದರು.  ಆದರೆ ಶನಿವಾರದ ಫೈನಲ್‌ ಅಮಿತ್‌ ಪಾಂಗಾಲ್‌ ಪಾಲಿಗೆ ಕಠಿನವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಲ್ಲಿ ಭಾರತೀಯನಿಗೆ ಎದುರಾ ಗುವವರು ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌, ಉಜ್ಬೆಕಿಸ್ಥಾನದ ಹಸನ್‌ಬಾಯ್‌ ದುಸ್ಮತೋವ್‌. 

ಕಳೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅಮಿತ್‌, ಬಳಿಕ ಬಲ್ಗೇರಿಯಾದಲ್ಲಿ ನಡೆದ ಪ್ರತಿಷ್ಠಿತ "ಸ್ಟ್ರಾಂಜಾ ಮೆಮೋರಿಯಲ್‌ ಟೂರ್ನಮೆಂಟ್‌'ನಲ್ಲಿ ಚಿನ್ನ ಗೆದ್ದು ಮೆರೆದಾಡಿದ್ದರು.


Trending videos

Back to Top