CONNECT WITH US  

ಸಿಂಗಾಪುರದಿಂದ ತಷ್ಮಾಗೆ ವಸತಿ ನೆರವು

ಬೆಂಗಳೂರು: ಕೊಡಗಿನಲ್ಲಿ ಉಂಟಾಗಿದ್ದ ಗುಡ್ಡ ಕುಸಿತದಿಂದ ಮನೆ, ಆಸ್ತಿ-ಪಾಸ್ತಿ, ಕ್ರೀಡಾ ದಾಖಲೆ ಕಳೆದುಕೊಂಡಿದ್ದ ತ್ರೋಬಾಲ್‌ ಆಟಗಾರ್ತಿ 23 ವರ್ಷದ ತಷ್ಮಾ ಮುತ್ತಪ್ಪ ಅವರಿಗೆ ವಿದೇಶದಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಈ ಕುರಿತಂತೆ ಉದಯವಾಣಿ ಆ. 29ರಂದು "ತ್ರೋಬಾಲ್‌ ಆಟಗಾರ್ತಿ ಬೀದಿಪಾಲು' ಎಂಬ ಶೀರ್ಷಿಕೆಯಡಿ ಮುಖ ಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ರಾಜ್ಯ ಮಾತ್ರವಲ್ಲದೇ ಸಿಂಗಾಪುರ, ದುಬಾೖನಲ್ಲಿ ನೆಲೆಸಿರುವ ರಾಜ್ಯದ ಜನತೆ ಕೂಡ ಸಹಾಯ ಮಾಡಿದ್ದಾರೆ. ಸಿಂಗಾಪುರದಲ್ಲಿರುವ ಕೊಡವ ಕುಟುಂಬ ಹಾಗೂ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಜಂಟಿಯಾಗಿ ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ (ಎಫ್ಎಂಸಿ) ಕಾಲೇಜು ರಸ್ತೆಯ ಬಳಿ ಬಾಡಿಗೆ ಮನೆಯೊಂದನ್ನು ಹುಡುಕಿ ತಷ್ಮಾಗೆ ನೀಡಿದೆ. ಇದಕ್ಕೆ ಬೇಕಿದ್ದ ಮುಂಗಡ ಹಣ 50 ಸಾವಿರ ರೂ.ವನ್ನು ಈಗಾಗಲೇ ಪಾವತಿ ಮಾಡಲಾಗಿದೆ. ಮನೆಯ ತಿಂಗಳ 10 ಸಾವಿರ ರೂ. ಬಾಡಿಗೆಯನ್ನು ಕೊಡಲು ಇನ್ನೊಬ್ಬರು ಒಪ್ಪಿದ್ದಾರೆ.

ಸೋಮವಾರ ನಿರಾಶ್ರಿತ ಕೇಂದ್ರಕ್ಕೆ ವಿದಾಯ ಹೇಳಿದ್ದೇನೆ. ಸಿಂಗಾಪುರದ ದಾನಿಗಳು ನೀಡಿರುವ ಬಾಡಿಗೆ ಮನೆಗೆ ಅಪ್ಪ-ಅಮ್ಮನ ಜತೆಗೆ ಬಂದಿದ್ದೇನೆ.  ಉದಯವಾಣಿ ಬಳಗಕ್ಕೆ ಜೀವನದುದ್ದಕ್ಕೂ ಆಭಾರಿಯಾಗಿದ್ದೇನೆ.
- ತಷ್ಮಾ, ತ್ರೋಬಾಲ್‌ ಆಟಗಾರ್ತಿ

Trending videos

Back to Top