CONNECT WITH US  

ಅಂತಿಮ ಟೆಸ್ಟ್‌ : ಇಂಗ್ಲೆಂಡ್‌ ತಂಡ ಪ್ರಕಟ

ಲಂಡನ್‌: ಭಾರತ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದ ಬಳಿಕ ಅನುಭವಿ ಅಲಸ್ಟೇರ್‌ ಕುಕ್‌ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ಕಾರಣ ಇಂಗ್ಲೆಂಡ್‌ ಆಯ್ಕೆಗಾರರು ಅಂತಿಮ ಟೆಸ್ಟ್‌ಗೆ ಕ್ರಿಸ್‌ ವೋಕ್ಸ್‌ ಮತ್ತು ಒಲಿ ಪೋಪ್‌ ಅವರನ್ನು 13 ಆಟಗಾರರನ್ನು ಒಳಗೊಂಡ  ತಂಡದಲ್ಲಿ ಸೇರಿಸಿಕೊಂಡಿದೆ. ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆಯಲಿ ರುವ ಅಂತಿಮ ಟೆಸ್ಟ್‌  ಬಳಿಕ ಕುಕ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ವಿದಾಯ ತಿಳಿಸಲಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್‌ನಲ್ಲಿ ಆಡಿದ ತಂಡ ವನ್ನೇ ಇಂಗ್ಲೆಂಡ್‌ ಅಂತಿಮ ಟೆಸ್ಟ್‌ನಲ್ಲಿಯೂ ಆಡಿಸಲು ಬಯಸಿದೆ ಮತ್ತು ಈ ಪಂದ್ಯದಲ್ಲಿಯೂ ಜಯಭೇರಿ ಬಾರಿಸಿ ಕುಕ್‌ಗೆ ಗೆಲುವಿನ ವಿದಾಯ ಹೇಳುವುದು ಇಂಗ್ಲೆಂಡಿನ ಲೆಕ್ಕಾಚಾರವಾಗಿದೆ. ಇದರಿಂದಾಗಿ ತಂಡದಲ್ಲಿದ್ದರೂ ಪೋಪ್‌ ಆಡುವ ಸಾಧ್ಯತೆ ಕಡಿಮೆ. ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್‌ ಈಗಾಗಲೇ ಸರಣಿ ತನ್ನದಾಗಿಸಿಕೊಂಡಿದೆ. ಸರಣಿಯ ಐದನೇ ಪಂದ್ಯ ಶುಕ್ರವಾರ ಆರಂಭವಾಗಲಿದೆ.  

ಇಂಗ್ಲೆಂಡ್‌ ತಂಡ: ಜೋ ರೂಟ್‌ (ನಾಯಕ), ಮೊಯಿನ್‌ ಅಲಿ, ಜೇಮ್ಸ್‌ ಆ್ಯಂರ್ಡಸನ್‌, ಜಾನಿ ಬೇರ್‌ಸ್ಟೊ , ಸ್ಟುವರ್ಟ್‌ ಬ್ರಾಡ್‌, ಜೋಸ್‌ ಬಟ್ಲರ್‌, ಅಲಸ್ಟೇರ್‌ ಕುಕ್‌, ಸ್ಯಾಮ್‌ ಕರನ್‌, ಕಿಟನ್‌ ಜೆನ್ನಿಂಗ್‌, ಒಲಿ ಪೋಪ್‌, ಅದಿಲ್‌ ರಶೀದ್‌, ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌.

ಕುಕ್‌ ಅನುಮಾನ 
ಇಂಗ್ಲೆಂಡ್‌ ಟೆಸ್ಟ್‌ ತಂಡದ ಆರಂಭಿಕ ಆಟಗಾರ ಅಲಸ್ಟೇರ್‌ ಕುಕ್‌ ಭಾರತದ ವಿರುದ್ಧದ ಅಂತಿಮ ಟೆಸ್ಟ್‌ ಬಳಿಕ ಅಂತಾರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳುತ್ತಿದ್ದಾರೆ ಆದರೆ ಅವರು ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆಡುವುದೇ  ಅನುಮಾನವಾಗಿದೆ. ಕುಕ್‌, ಅವರ ಪತ್ನಿ ಆಲಿಸ್‌ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದು, ಅಂತಿಮ ಟೆಸ್ಟ್‌ ಪಂದ್ಯದ ವೇಳೆ ಆಲಿಸ್‌ ಮಗುವಿಗೆ ಜನ್ಮ ನೀಡುವ ಸಾಧ್ಯತೆಗಳಿವೆ. 

Trending videos

Back to Top