CONNECT WITH US  

ಆರ್‌ಸಿಬಿ ಕೋಚಿಂಗ್‌ ತಂಡದಲ್ಲಿ ಆಶಿಷ್‌ ನೆಹ್ರಾ

ಹೊಸದಿಲ್ಲಿ: ಮಾಜಿ ಎಡಗೈ ಬೌಲರ್‌ ಆಶಿಷ್‌ ನೆಹ್ರಾ ಅವರನ್ನು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಬೌಲಿಂಗ್‌ ಕೋಚಿಂಗ್‌ ತಂಡಕ್ಕೆ ಆಯ್ಕೆ ಮಾಡಲಾಗಿದೆ. "ಆಶಿಷ್‌ ನೆಹ್ರಾ ಆರ್‌ಸಿಬಿ ಕೋಚಿಂಗ್‌ ತಂಡದಲ್ಲಿರುವುದು ಖುಷಿಯ ವಿಚಾರ. ತಂಡದ ಉತ್ತಮ ಪ್ರದರ್ಶನಕ್ಕೆ ನೆಹ್ರಾ, ಕರ್ಸ್ಟನ್‌ಅವರಿಗೆ ನೆರವಾಗಲಿದ್ದಾರೆ' ಎಂದು ಆರ್‌ಸಿಬಿ ತಂಡದ ಅಧ್ಯಕ್ಷ ಸಂಜೀವ್‌  ಚುರಿವಾಲಾ ಹೇಳಿದ್ದಾರೆ.

"ಆರ್‌ಸಿಬಿ ತಂಡ ಕೋಚಿಂಗ್‌ ತಂಡವನ್ನು ಸೇರಲು ಖುಷಿಯಾಗುತ್ತಿದೆ. ನನ್ನನ್ನು  ಈ ತಂಡಕ್ಕೆ ಆಯ್ಕೆ ಮಾಡಿದ ಆಡಳಿತ ಮಂಡಳಿಗೆ ಧನ್ಯವಾದಗಳು. ಮುಂದಿನ ಯಶಸ್ವಿ ಋತುವಿಗಾಗಿ ಕಾಯುತ್ತಿದ್ದೇನೆ' ಎಂದಿದ್ದಾರೆ ನೆಹ್ರಾ. ಇದಕ್ಕೂ ಮುನ್ನ ಟೀಮ್‌ ಇಂಡಿಯಾದ ಮಾಜಿ ಕೋಚ್‌, ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಅವರನ್ನು ಆರ್‌ಸಿಬಿಯ ನೂತನ ಕೋಚ್‌ ಹಾಗೂ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿತ್ತು. ಇದಕ್ಕೂ ಮುನ್ನ ಆರ್‌ಸಿಬಿ ಕೋಚ್‌ ಆಗಿದ್ದ ಡೇನಿಯಲ್‌ ವೆಟರಿ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

Trending videos

Back to Top