ಆರಂಭಕಾರ ಪೃಥ್ವಿ ಶಾ ಪರ ವೆಂಗ್ಸರ್ಕಾರ್ ಬ್ಯಾಟಿಂಗ್
Team Udayavani, Sep 6, 2018, 6:00 AM IST
ಮುಂಬಯಿ: ಆತಿಥೇಯ ಇಂಗ್ಲೆಂಡ್ ವಿರುದ್ಧ ಶುಕ್ರವಾರದಿಂದ ಓವಲ್ನಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಯುವ ಆರಂಭಕಾರ ಪೃಥ್ವಿ ಶಾ ಅವರನ್ನು ಆಡಿಸಬೇಕು ಎಂಬುದಾಗಿ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ. “ಪೃಥ್ವಿ ಶಾ ಅವರನ್ನು ಅಂತಿಮ 2 ಟೆಸ್ಟ್ ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗಿತ್ತು. 4ನೇ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ 5ನೇ ಟೆಸ್ಟ್ನಲ್ಲಾದರೂ ಕಣಕ್ಕಿಳಿಸಬೇಕು. ಇಬ್ಬರೂ ಆರಂಭಿಕರು ವಿಫಲರಾದ್ದರಿಂದ ಶಾ ಅವರನ್ನು ಆಡಿಸುವುದು ಉತ್ತಮ ನಡೆಯಾಗಲಿದೆ. ಆದರೆ ನನ್ನ ಪ್ರಕಾರ, ಈ ಎಳೆಯ ಆರಂಭಿ ಕನನ್ನು ಇಂಗ್ಲೆಂಡ್ನಲ್ಲಿ ಆಡಿಸುವ ಬದಲು ತವರಿನ ಸರಣಿಯಲ್ಲಿ ಅವಕಾಶ ನೀಡಬೇಕಿತ್ತು. ಏನೇ ಆಗಲಿ, ಆಯ್ಕೆಗಾರರು ಶಾ ಮೇಲೆ ವಿಶ್ವಾಸವಿರಿಸಿದ್ದಾರೆ. ಈಗಾಗಲೇ ಸರಣಿ ಸೋತಿರುವುದರಿಂದ ಇಂಥದೊಂದು ಪ್ರಯೋಗಕ್ಕೆ ಮುಂದಾ ಗಬಹುದು’ ಎಂದು ವೆಂಗ್ಸರ್ಕಾರ್ ಅಭಿಪ್ರಾಯಪಟ್ಟರು.
ಮುಂಬಯಿ ಆರಂಭಿಕರಾದ ಪೃಥ್ವಿ ಶಾ 2016-17ರ ರಣಜಿ ಸೆಮಿಫೈನಲ್ನಲ್ಲಿ ತಮಿಳುನಾಡು ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದ್ದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿ ಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ