CONNECT WITH US  

ಹಿಂದೆ ಸರಿದ ಭಾಂಬ್ರಿ, ದಿವಿಜ್‌

ಡೇವಿಸ್‌ ಕಪ್‌ ವಿಶ್ವ ಗ್ರೂಪ್‌ ಪ್ಲೇ-ಆಫ್

ಹೊಸದಿಲ್ಲಿ: ಸರ್ಬಿಯಾ ವಿರುದ್ಧ ಅವರದೇ ನೆಲದಲ್ಲಿ "ಡೇವಿಸ್‌ ಕಪ್‌ ವರ್ಲ್ಡ್ ಗ್ರೂಪ್‌ ಪ್ಲೇ-ಆಫ್' ಪಂದ್ಯವಾಡಲಿರುವ ಭಾರತಕ್ಕೆ ದೊಡ್ಡ ಮಟ್ಟದ ಆಘಾತ ಎದುರಾಗಿದೆ. ಗಾಯದ ಕಾರಣದಿಂದ ಯೂಕಿ ಭಾಂಬ್ರಿ ಮತ್ತು ದಿವಿಜ್‌ ಶರಣ್‌ ಈ ಕೂಟದಿಂದ ಹಿಂದೆ ಸರಿದಿದ್ದಾರೆ. ಮೀಸಲು ಆಟಗಾರನಾಗಿ ತಂಡ ಸೇರಿಕೊಳ್ಳಲು ಸುಮಿತ್‌ ನಗಾಲ್‌ ನಿರಾಕರಿಸಿದ್ದಾರೆ.

ಮೀಸಲು ಆಟಗಾರನಾಗಿದ್ದ ಸಾಕೇತ್‌ ಮೈನೆನಿ ಈಗ ತಂಡದ ಪೂರ್ಣ ಪ್ರಮಾಣದ ಆಟ ಗಾರನಾಗಿ ಆಯ್ಕೆಯಾಗಿದ್ದಾರೆ. ದಿವಿಜ್‌ ಬದಲು ಎನ್‌. ಶ್ರೀರಾಮ್‌ ಬಾಲಾಜಿ ಅವ ರನ್ನು ಸೇರಿಸಿಕೊಳ್ಳಲಾಗಿದೆ. ಮೀಸಲು ಆಟಗಾರನಾಗಿ ಪುಣೆಯ ಪ್ರತಿಭಾ ನ್ವಿತ ಟೆನಿಸಿಗ ಅರ್ಜುನ್‌ ಖಾಡೆ ಸರ್ಬಿಯಾಕ್ಕೆ ಪಯಣಿಸಲಿದ್ದಾರೆ.

ಜೊಕೋವಿಕ್‌ ಆಡುವುದಿಲ್ಲ
ಭಾರತದೆದುರಿನ ಈ ಸ್ಪರ್ಧೆಯಲ್ಲಿ ವಿಶ್ವದ ಸ್ಟಾರ್‌ ಸಿಂಗಲ್ಸ್‌ ಆಟಗಾರ ನೊವಾಕ್‌ ಜೊಕೋವಿಕ್‌ ಆಡದಿರಲು ನಿರ್ಧರಿಸಿದ್ದಾರೆ. ಇದರೊಂದಿಗೆ ವಿಶ್ವದ ಮಾಜಿ ನಂ.1 ಆಟಗಾರನಾಗಿರುವ ಜೊಕೋ ವಿಕ್‌ ಭಾರತದೆದುರಿನ ಡೇವಿಸ್‌ ಕಪ್‌ ಸೆಣಸಾಟವನ್ನು ಸತತ 2ನೇ ಸಲ ತಪ್ಪಿಸಿಕೊಂಡಂತಾ ಗುತ್ತದೆ.  2014ರಲ್ಲಿ ಬೆಂಗಳೂರಿನಲ್ಲಿ ನಡೆದ ಕೂಟದಿಂದಲೂ ಜೊಕೋ ದೂರ ಉಳಿದಿದ್ದರು. ಹೀಗಾಗಿ 4 ವರ್ಷಗಳ ಹಿಂದಿನ ಸರ್ಬಿಯಾ ತಂಡವನ್ನೇ ಭಾರತ ಈ ಬಾರಿ ಎದುರಿಸಲಿದೆ. ಫಿಲಿಪ್‌ ಕ್ರಾಜಿನೋವಿಕ್‌ ಮತ್ತು ದುಸಾನ್‌ ಲಾಜೋವಿಕ್‌ ಸರ್ಬಿಯಾ ತಂಡದ ಪ್ರಮುಖ ಆಟಗಾರ ರಾಗಿರುತ್ತಾರೆ.

ಸರ್ಬಿಯಾ ಬಲಿಷ್ಠ ತಂಡ
"ಜೊಕೋವಿಕ್‌ ಆಡದಿರುವುದು ಭಾರತದ ಪಾಲಿಗೆ ಶುಭ ಸಮಾಚಾರ. ಆದರೂ ಸರ್ಬಿಯಾ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದೆ. ಹೀಗಾಗಿ ಅವರನ್ನು ಎದುರಿಸುವುದು ಸುಲಭವಲ್ಲ. ಭಾರೀ ಪ್ರಯತ್ನವನ್ನೇ ಮಾಡಬೇಕಾಗುತ್ತದೆ' ಎಂಬುದಾಗಿ ಭಾರತದ ಡೇವಿಸ್‌ ಕಪ್‌ ತಂಡದ ಕೋಚ್‌ ಜೀಶನ್‌ ಅಲಿ ಹೇಳಿದ್ದಾರೆ.

ಕ್ರಾಜಿನೋವಿಕ್‌ ಅತ್ಯಂತ ಅಪಾಯಕಾರಿ ಆಟಗಾರನಾಗಿದ್ದು, 2014ರ ಬಳಿಕ ಭಾರತದ ವಿರುದ್ಧ ಸಿಂಗಲ್ಸ್‌ನಲ್ಲಿ ಸೋತದ್ದಿಲ್ಲ. ಈಗ ವಿಶ್ವ ರ್‍ಯಾಂಕಿಂಗ್‌ನಲ್ಲಿ 70ರಷ್ಟು ಸ್ಥಾನಗಳ ಪ್ರಗತಿ ಸಾಧಿಸಿಸುª, 33ನೇ ಸ್ಥಾನ ಅಲಂಕರಿಸಿದ್ದಾರೆ. 28ರ ಹರೆಯದ ಲಾಜೋವಿಕ್‌ 2014ರಲ್ಲಿ ಯೂಕಿ ಭಾಂಬ್ರಿ ಅವರನ್ನು ಸೋಲಿಸಿದರೂ ಬಳಿಕ ಸೋಮ್‌ದೇವ್‌ ವಿರುದ್ಧ ಸೋಲನುಭವಿಸಿದ್ದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top