CONNECT WITH US  

ಕಿರಿಯರಿಗೆ ಕಂಚು, ಮಿಂಚದ ಹಿರಿಯರು

ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌

ದಿವ್ಯಾಂಶ್‌ ಸಿಂಗ್‌ ಪನ್ವಾರ್‌, ಶ್ರೇಯಾ ಅಗರ್ವಾಲ್‌ 

ಚಾಂಗ್‌ವೋನ್‌ (ಕೊರಿಯಾ): ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಕಿರಿಯರ ವಿಭಾಗದಲ್ಲಿ ಭಾರತದ ದಿವ್ಯಾಂಶ್‌ ಸಿಂಗ್‌ ಪನ್ವಾರ್‌, ಶ್ರೇಯಾ ಅಗರ್ವಾಲ್‌ ಕಂಚಿನ ಪದಕ ಜಯಿಸಿದ್ದಾರೆ. ಆದರೆ ಹಿರಿಯರ ವಿಭಾಗದಲ್ಲಿ ಭಾರತದ ಶೂಟರ್‌ಗಳು ಮುಗ್ಗರಿಸಿದ್ದಾರೆ. 

ವಿಶ್ವ ಚಾಂಪಿಯನ್‌ಶಿಪ್‌ನ 4ನೇ ದಿನವಾದ ಬುಧವಾರ ಕಿರಿಯರ ವಿಭಾಗದ ಮಿಶ್ರ 10 ಮೀ. ರೈಫ‌ಲ್‌ ಸ್ಪರ್ಧೆಯಲ್ಲಿ ದಿವ್ಯಾಂಶ್‌ ಸಿಂಗ್‌-ಶ್ರೇಯಾ ಅಗರ್ವಾಲ್‌ ಜೋಡಿ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು. ಫೈನಲ್‌ನಲ್ಲಿ 435 ಅಂಕ ಗಳಿಸಿ ಕಂಚಿನ ಪದಕ ಗೆದ್ದರು. ಇಟಲಿಯ ಜೋಡಿ ಚಿನ್ನ, ಇರಾನ್‌ ಜೋಡಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದೆ. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೂಂದು ಜೋಡಿ ಇಳವೆನಿಲ್‌ ವಲರಿವನ್‌-ಹೃದಯ್‌ ಹಜಾರಿಕಾ 829.5 ಅಂಕಗಳೊಂದಿಗೆ 13ನೇ ಸ್ಥಾನಕ್ಕಿಳಿದರು.

ಇದರೊಂದಿಗೆ ಈ ಪ್ರತಿಷ್ಠಿತ ಅಂತಾ ರಾಷ್ಟ್ರೀಯ ಶೂಟಿಂಗ್‌ ಫೆಡರೇಶನ್‌ ಟೂರ್ನಿಯಲ್ಲಿ ಭಾರತ ಒಟ್ಟು 3 ಚಿನ್ನ , 3 ಬೆಳ್ಳಿ, 3 ಕಂಚಿನ ಪದಕ ಗೆದ್ದಂತಾಗಿದೆ. ಇದು ಈ ಕೂಟದ ಅತ್ಯುತ್ತಮ ಪ್ರದರ್ಶನವಾಗಿದ್ದು, ಚೀನದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದೆ. ಆತಿಥೇಯ ಕೊರಿಯಾ ಮೊದಲ ಸ್ಥಾನ, ರಶ್ಯ ಎರಡನೇ ಸ್ಥಾನದಲ್ಲಿದೆ.


Trending videos

Back to Top