CONNECT WITH US  

ISSF ವಿಶ್ವ ಚಾಂಪ್ಯನ್‌ಶಿಪ್‌: ಜೂ| ಶೂಟರ್‌ಗಳಿಂದ ಭಾರತಕ್ಕೆ 2 ಚಿನ್ನ

ಚಾಂಗ್‌ವಾನ್‌, ದಕ್ಷಿಣ ಕೊರಿಯ : ಇಲ್ಲೀಗ ಸಾಗುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪ್ಯನ್‌ಶಿಪ್‌ ನಲ್ಲಿ ಜೂನಿಯರ್‌ ಶೂಟರ್‌ಗಳು ಭಾರತಕ್ಕೆ ಎರಡು ಚಿನ್ನದ ಪದಕಗಳನ್ನು ಗೆದುಕೊಟ್ಟಿದ್ದಾರೆ. 

ಪುರುಷರ 10 ಮೀ. ಏರ್‌ ರೈಫ‌ಲ್‌ ನಲ್ಲಿ ಭಾರತದ ಜೂನಿಯರ್‌ ಶೂಟರ್‌ ಹೃದಯ್‌ ಹಜಾರಿಕಾ ಅವರು ಚಿನ್ನ ಗೆದ್ದರೆ ಮಹಿಳೆಯ ತಂಡ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು. 

ಹೃದಯ್‌ ಹಜಾರಿಕಾ ಅವರು ಫೈನಲ್‌ನಲ್ಲಿ 627.3 ಅಂಕ ಗಳಿಸುವ ಮೂಲಕ ಇರಾನಿನ ಮೊಹಮ್ಮದ್‌ ಆರಿಫ್ ನೆಕೋನಾಮ್‌ ಅವರನ್ನು ಪರಾಭವಗೊಳಿಸಿದರು. 

ಭಾರತದ ಮಹಿಳೆಯರ ತಂಡದ ಇ. ವಲರಿವನ್‌ (631), ಶ್ರೇಯಾ ಅಗರ್‌ವಾಲ್‌ (628.5) ಮತ್ತು ಮಾನಿನಿ ಕೌಶಿಕ್‌ (621.2) ಅತ್ಯುತ್ತಮ ನಿರ್ವಹಣೆ ತೋರಿ ವಿಶ್ವ ದಾಖಲೆ ಸ್ಥಾಪಿಸಿ ಚಿನ್ನದ ಪದಕ ಗೆದ್ದುಕೊಂಡರು. 

Trending videos

Back to Top