CONNECT WITH US  

ಓವಲ್ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಹನುಮ ವಿಹಾರಿಗೆ ಟೆಸ್ಟ್ ಕ್ಯಾಪ್ *ಅಲಿಸ್ಟರ್ ಕುಕ್ ಗೆ ವಿದಾಯದ ಪಂದ್ಯ

ಲಂಡನ್ : ಓವಲ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದೆ. ಯುವ ಪ್ರತಿಭೆ ಹನುಮ ವಿಹಾರಿ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. 

ಈಗಾಗಲೇ ಸರಣಿ ಕಳೆದುಕೊಂಡಿರುವ ಟೀಂ ಇಂಡಿಯಾ ಸರಣಿಯನ್ನು ಕೊನೆಪಕ್ಷ ಈ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇಂಗ್ಲೆಂಡ್ ನ ಅಲಿಸ್ಟರ್ ಕುಕ್ ಅವರ ವಿದಾಯದ ಪಂದ್ಯವಾಗಿದ್ದು ಹೀಗಾಗಿ ಕುಕ್ ಗೆ ಗೆಲುವಿನ ವಿದಾಯ ನೀಡುವ ಅಭಿಲಾಷೆ ಇಂಗ್ಲೆಂಡ್ ತಂಡದ್ದು. 

ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು ಹಾರ್ದಿಕ್ ಪಾಂಡ್ಯ ಬದಲಿಗೆ ಹನುಮ ವಿಹಾರಿಗೆ ಟೆಸ್ಟ್ ಕ್ಯಾಪ್ ನೀಡಲಾಗಿದೆ. ರವಿಚಂದ್ರನ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ತಂಡದಲ್ಲಿ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇಂಗ್ಲೆಂಡ್ ನಾಯಕ ಜೋರೂಟ್ ಈ ಸರಣಿಯ ಏಲ್ಲಾ ಐದು ಪಂದ್ಯಗಳಲ್ಲಿ ಟಾಸ್ ಗೆದ್ದು ದಾಖಲೆ ಬರೆದರು. 

ತಂಡಗಳು: 
ಭಾರತ:
ವಿರಾಟ್ ಕೊಹ್ಲಿ (ನಾಯಕ) ಶಿಖರ್ ಧವನ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೇಟ್ ಕೀಪರ್) ರವೀಂದ್ರ ಜಡೇಜ,ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಜಸ್ಪ್ರೀತ್  ಬುಮ್ರಾ
ಇಂಗ್ಲೆಂಡ್: ಜೋ ರೂಟ್ (ನಾಯಕ) ಅಲಿಸ್ಟರ್ ಕುಕ್, ಕೀಟನ್ ಜೆನ್ನಿಂಗ್ಸ್, ಮೋಯಿನ್ ಆಲಿ, ಜಾನಿ ಬೇರಿಸ್ಟೋ  ( ವಿಕೇಟ್ ಕೀಪರ್), ಬೆನ್  ಸ್ಟೋಕ್ಸ್, ಜಾಸ್ ಬಟ್ಲರ್, ಸ್ಯಾಮ್ ರ‍್ರನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ .


Trending videos

Back to Top