ಆಸೀಸ್ ಓಪನ್ಗೆ ಇನ್ಫೋಸಿಸ್ ತಂತ್ರಜ್ಞಾನ
Team Udayavani, Sep 11, 2018, 6:25 AM IST
ಮೆಲ್ಬರ್ನ್: ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ಸಂಸ್ಥೆ ಇನ್ಫೋಸಿಸ್ “ಆಸ್ಟ್ರೇಲಿಯನ್ ಓಪನ್’ ಟೆನಿಸ್ ಕೂಟದಲ್ಲಿ ಕಾರ್ಯನಿರ್ವಹಿಸಲು ಅಣಿಯಾಗಿದೆ. 3 ವರ್ಷಗಳ ಕಾರ್ಯತಂತ್ರ ತಂತ್ರಜ್ಞಾನ ಪಾಲುದಾರಿಕೆ ಒಪ್ಪಂದಕ್ಕೆ ಇನ್ಫೋಸಿಸ್ ಸಹಿ ಹಾಕಿದೆ.
ಮೆಲ್ಬರ್ನ್ನಲ್ಲಿ ನಡೆಯಲಿರುವ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಅತ್ಯಂತ ಜನಪ್ರಿಯ ಟೆನಿಸ್ ಕೂಟ. ಡಿಜಿಟಲ್ ಸಹಭಾಗಿತ್ವದ ಮೂಲಕ ಕೂಟದಲ್ಲಿ ಜನರಿಗೆ ಹೆಚ್ಚಿನ ಅನುಭವ ನೀಡಲು ಇನ್ಫೋಸಿಸ್ ತಯಾರಾಗಿದೆ.