CONNECT WITH US  

ಡಿ. 22: ಸಂಜು ಸ್ಯಾಮ್ಸನ್‌ ಮದುವೆ

ತಿರುವನಂತಪುರ: ಕೇರಳ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನ ಆರಂಭಿಸಲಿದ್ದಾರೆ. 23 ವರ್ಷದ ಸಂಜು ತನ್ನ ಕ್ಲಾಸ್‌ಮೇಟ್‌ ಚಾರು ಅವರ ಕೈ ಹಿಡಿಯಲಿದ್ದಾರೆ. ಈ ವಿಷಯವನ್ನು ಅವರು ಫೋಟೋ ಸಹಿತ ಫೇಸ್‌ಬುಕ್‌ನಲ್ಲಿ  ಪ್ರಕಟಿಸಿದ್ದಾರೆ. 

"ಕಾಲೇಜು ದಿನಗಳಿಂದ ಆಕೆ ನನಗೆ ಪರಿಚಯ. ಅದಕ್ಕಿಂತ ಹೆಚ್ಚಾಗಿ ಜೀವದ ಗೆಳತಿ.  ನಮ್ಮ ಪ್ರೀತಿಯನ್ನು ಹೆತ್ತವರೂ ಒಪ್ಪಿಕೊಂಡಿದ್ದಾರೆ. ಡಿಸೆಂಬರ್‌ 22ಕ್ಕೆ ಮದುವೆ' ಎಂದು ಸ್ಯಾಮ್ಸನ್‌ ತಿಳಿಸಿದ್ದಾರೆ. 


Trending videos

Back to Top