CONNECT WITH US  

3 ತಿಂಗಳಿಗೆ ರವಿಶಾಸ್ತ್ರಿ ಸಂಭಾವನೆ 2.5 ಕೋಟಿ ರೂ.

ಹೊಸದಿಲ್ಲಿ: ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟಿಗರ ಹಾಗೂ ಕೋಚ್‌ ರವಿಶಾಸ್ತ್ರಿ ಅವರ ವೇತನ ವಿವರವನ್ನು ಬಿಸಿಸಿಐ ಪ್ರಕಟಿಸಿದೆ. ರವಿಶಾಸ್ತ್ರಿ 3 ತಿಂಗಳಿಗೆ ಪಡೆಯುವ ಸಂಭಾವನೆ, ಬರೋಬ್ಬರಿ 2.5 ಕೋಟಿ ರೂ.ಗೂ ಅಧಿಕ. ಬಿಸಿಸಿಐ ಈಗಾಗಲೇ 3 ತಿಂಗಳ ಮುಂಗಡ ಹಣವನ್ನು ರವಿಶಾಸ್ತ್ರಿ ಖಾತೆಗೆ ಜಮೆ ಮಾಡಿದೆ. ಜತೆಗೆ 2018ರಲ್ಲಿ ನೀಡಬೇಕಿದ್ದ ಸಂಭಾವನೆಯನ್ನೂ ಆಟಗಾರರಿಗೆ ನೀಡಲಾಗಿದೆ ಎಂದು ತಿಳಿಸಿದೆ.

ಕೊಹ್ಲಿಗೂ ಕೋಟಿ ಕೋಟಿ...
ಭಾರತದ ಆಟಗಾರರೂ ಆರ್ಥಿಕವಾಗಿ ಕುಬೇರನ ಸಾಲಿನಲ್ಲಿ ನಿಂತಿದ್ದಾರೆ. ನಾಯಕ ಕೊಹ್ಲಿ ಸರಣಿಯೊಂದಕ್ಕೆ ಐಸಿಸಿಯಿಂದ ಸಿಗುವ ಬಹುಮಾನ ಮೊತ್ತ ಹೊರತುಪಡಿಸಿ ಬಿಸಿಸಿಐನಿಂದ ಸರಣಿಯೊಂದಕ್ಕೆ 1.25 ಕೋಟಿ ರೂ. ಪಡೆಯುತ್ತಾರೆ. ಉಳಿದಂತೆ 2018ರ ಸಾಲಲ್ಲಿ ಭುವನೇಶ್ವರ ಕುಮಾರ್‌ (1.18 ಕೋಟಿ ರೂ.), ರೋಹಿತ್‌ ಶರ್ಮ (1.12 ಕೋಟಿ ರೂ.), ಜಸ್‌ಪ್ರೀತ್‌ ಬುಮ್ರಾ (1.13 ಕೋಟಿ ರೂ.), ಶಿಖರ್‌ ಧವನ್‌ (1.12 ಕೋಟಿ ರೂ.), ಚೇತೇಶ್ವರ್‌ ಪೂಜಾರ (1 ಕೋಟಿ ರೂ.), ಆರ್‌. ಅಶ್ವಿ‌ನ್‌ (92.37 ಲಕ್ಷ ರೂ.) ಹಾರ್ದಿಕ್‌ ಪಾಂಡ್ಯ (50.59 ಲಕ್ಷ ರೂ.), ಇಶಾಂತ್‌ ಶರ್ಮ (55.42 ಲಕ್ಷ ರೂ.), ದಿನೇಶ್‌ ಕಾರ್ತಿಕ್‌ (53.42 ಲಕ್ಷ ರೂ.), ಪಾರ್ಥಿವ್‌ ಪಟೇಲ್‌ (43.92 ಲಕ್ಷ ರೂ.), ಯಜುವೇಂದ್ರ ಚಾಹಲ್‌ (53.42 ಲಕ್ಷ ರೂ.) ಹಾಗೂ ವೃದ್ಧಿಮಾನ್‌ ಸಾಹಾ (44.34 ಲಕ್ಷ ರೂ.) ಬಿಸಿಸಿಐನಿಂದ ಭಾರೀ ಮೊತ್ತವನ್ನೇ ಪಡೆದಿದ್ದಾರೆ.


Trending videos

Back to Top