ಟೋಕಿಯೊ ಒಲಿಂಪಿಕ್ಸ್ಗೆ 80 ಸಾವಿರ ಸ್ವಯಂಸೇವಕರು
Team Udayavani, Sep 13, 2018, 6:00 AM IST
ಟೋಕಿಯೊ: ರಿಯೋ ಒಲಿಂಪಿಕ್ಸ್ ಕೂಟ ಯಶಸ್ವಿಯಾಗಿ ಮುಗಿದ ಬಳಿಕ ಇದೀಗ ಟೋಕಿಯೊ ಒಲಿಂಪಿಕ್ಸ್ಗೆ ಸಿದ್ಧತೆಗಳು ಆರಂಭವಾಗಿವೆ. ಒಟ್ಟಾರೆ 80 ಸಾವಿರ ಸ್ವಯಂ ಸೇವಕರನ್ನು ಕೂಟಕ್ಕೆ ನೇಮಿಸಿಕೊಳ್ಳುವುದಾಗಿ ಬುಧವಾರ ಸಂಘಟಕರು ಘೋಷಿಸಿದ್ದಾರೆ.
ಸ್ವಯಂ ಸೇವಕರಾಗಲು ಬಯಸುವ ಜಪಾನಿ ಅಭ್ಯರ್ಥಿಗಳಿಗೆ 18 ವರ್ಷ ಮೀರಿರಬೇಕು. ವಿದೇಶಿಗರಾಗಿದ್ದರೆ ವಿದೇಶಿ ಪ್ರಜೆಯ ಗುರುತು ಚೀಟಿ ಜತೆಗೆ ಕೂಟ ನಡೆಯುವ ದಿನಾಂಕದಲ್ಲಿ ಚಾಲ್ತಿಯಲ್ಲಿರುವ ವೀಸಾ ಹೊಂದಿರಬೇಕು ಎಂದು ತಿಳಿಸಲಾಗಿದೆ.