ಒಲಿಂಪಿಕ್ಸ್‌ ತಾರೆಯರಿಗೆಮನು ಅತ್ರಿ-ಬಿ.ಸುಮಿತ್‌ ರೆಡ್ಡಿ ಶಾಕ್‌


Team Udayavani, Sep 13, 2018, 6:20 AM IST

manu-atri-b-sumeeth-reddy.jpg

ಟೋಕಿಯೋ: ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಆಟಗಾರರ ಪರಾಕ್ರಮ ಮುಂದುವರಿದಿದೆ. ಪುರುಷರ ವಿಭಾಗದ ಡಬಲ್ಸ್‌ ಪಂದ್ಯದಲ್ಲಿ ಭಾರತದ ಮನು ಅತ್ರಿ – ಬಿ.ಸುಮಿತ್‌ ರೆಡ್ಡಿ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತರಾದ ಮಲೇಷ್ಯಾದ ಯಶಸ್ವಿ ಜೋಡಿ ಗೋಹ್‌ ವಿ ಶೆಮ್‌ – ಥಾನ್‌ ವೀ ಕಿಯಾಂಗ್‌ ಅವರನ್ನು 15-21, 23-21, 21-19 ಗೇಮ್‌ಗಳ ಅಂತರದಿಂದ ಸೋಲಿಸಿದರು. 

ಇದರೊಂದಿಗೆ ಭಾರತೀಯ ಜೋಡಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಿತು. ಮುಂದಿನ ಪಂದ್ಯದಲ್ಲಿ ಭಾರತೀಯ ಜೋಡಿ ಚೀನಾದ ಹೆ ಜಿಟಿಂಗ್‌-ಥಾನ್‌ ಕ್ವಿಂಗ್‌ ಅವರನ್ನು ಎದುರಿಸಲಿದ್ದಾರೆ.

ಜಿದ್ದಾಜಿದ್ದಿನ ಹಣಾಹಣಿ: ರಾಷ್ಟ್ರೀಯ ಡಬಲ್ಸ್‌ ಚಾಂಪಿಯನ್‌ಗಳಾದ ಮನು ಅತ್ರಿ-ಬಿ.ಸುಮಿತ್‌ ರೆಡ್ಡಿ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿದರು. ಮೊದಲ ಗೇಮ್‌ನಲ್ಲಿ ಭಾರತೀಯ ಜೋಡಿ 15-21 ಗೇಮ್‌ಗಳ ಅಂತರದಿಂದ ಎದುರಾಳಿಗೆ ಶರಣಾಗಿ 0-1 ಹಿನ್ನಡೆ ಅನುಭವಿಸಿತು. ಎರಡನೇ ಸುತ್ತಿನಲ್ಲಿ ಭಾರತೀಯ ಆಟಗಾರರು ಸಿಡಿದೆದ್ದರು.  ಗೋಹ್‌ ವಿ ಶೆಮ್‌ – ಥಾನ್‌ ವೀ ಕಿಯಾಂಗ್‌ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದರು. ಭಾರತ 2ನೇ ಗೇಮ್‌ನಲ್ಲಿ ವೀರೋಚಿತ 23-21 ಗೇಮ್‌ನಿಂದ ಗೆಲುವು ಸಾಧಿಸಿತು. ಅಲ್ಲಿಗೆ ಇತ್ತಂಡಗಳ ತಲಾ 1-1 ಗೇಮ್‌ ಸಮವಾಗಿಸಿಕೊಂಡಿದ್ದವು. ಹೀಗಾಗಿ ಮೂರನೇ ಸುತ್ತಿಗೆ ಹೆಚ್ಚಿನ ಮಹತ್ವ ಸಿಕ್ಕಿತು. ಅಲ್ಲಿ ಎರಡೂ ತಂಡಗಳಿಂದ ಪ್ರಬಲ ಹೋರಾಟ ನಡೆಯಿತು. ಅಂತಿಮವಾಗಿ ಭಾರತೀಯರು 21-19ರಿಂದ ಮುನ್ನಡೆದು 2-1ರಿಂದ ಪಂದ್ಯ ವಶ ಪಡಿಸಿಕೊಂಡರು.

2015ರಲ್ಲೂ ಗೆದ್ದಿದ್ದ ಮನು-ಸುಮಿತ್‌:  2015ರಲ್ಲಿ ಗೋಹ್‌ ವಿ ಶೆಮ್‌ – ಥಾನ್‌ ವೀ ಕಿಯಾಂಗ್‌ ವಿರುದ್ಧ ಸೈಯದ್‌ ಮೋದಿ ಗ್ರ್ಯಾನ್‌ ಫ್ರಿ ಗೋಲ್ಡ್‌ ಕೂಟದಲ್ಲೂ ಭಾರತೀಯರು ಮುಖಾಮುಖೀಯಾಗಿದ್ದರು. ಆ ಹೋರಾಟದಲ್ಲಿ ಮನು-ಸುಮಿತ್‌ ಜೋಡಿ ಗೆಲುವು ಸಾಧಿಸಿತು. ಇದೀಗ 3 ವರ್ಷದ ಬಳಿಕ ಭಾರತೀಯರು ಮತ್ತೂಂದು ಗೆಲುವು ಸಾಧಿಸಿರುವುದು ವಿಶೇಷ.

ಮಹಿಳಾ ಡಬಲ್ಸ್‌:ಅಶ್ವಿ‌ನಿ ಜೋಡಿಗೆ ಸೋಲು: ಮಹಿಳಾ ಡಬಲ್ಸ್‌ ಪಂದ್ಯದಲ್ಲಿ ಅಶ್ವಿ‌ನಿ ಪೊನ್ನಪ್ಪ – ಸಿಕ್ಕಿ ರೆಡ್ಡಿ ಒಳಗೊಂಡ ಭಾರತ ತಂಡ 17-21, 13-21 ಅಂಕಗಳ ಅಂತರದಿಂದ ಕೊರಿಯಾದ ಚಾಂಗ್‌ ಯೆ ನ ಹಾಗೂ ಜುಂಗ್‌ ಕ್ಯುಂಗ್‌ ಇವುನ್‌ ವಿರುದ್ಧ ಸೋಲು ಅನುಭವಿಸಿ ಕೂಟದಿಂದ ಹೊರಬಿದ್ದರು .

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.